ಡಿಸಿಎಂ ಡಿ.ಕೆ ಶಿವಕುಮಾರ್ ನಿವಾಸದಲ್ಲಿ ನಾಗರಹಾವಿನ ಮರಿ ಪ್ರತ್ಯಕ್ಷ!

ಬೆಂಗಳೂರು : ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸದಲ್ಲಿ ಶನಿವಾರ ಮಧ್ಯಾಹ್ನ ನಾಗರಹಾವಿನ ಮರಿ ಪ್ರತ್ಯಕ್ಷವಾಗಿದೆ.

ಸುಮಾರು ಒಂದೂವರೆ ಅಡಿ ಉದ್ದದ ಹಾವಿನ ಮರಿಯನ್ನು ಕಂಡು ಗಾಬರಿಗೊಂಡ ಸಿಬ್ಬಂದಿ, ಕೂಡಲೇ ವನ್ಯಜೀವಿ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅವರು ನಾಗರಹಾವಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ.

ನಾಗರಹಾವಿನ ಮರಿ ಪತ್ತೆಯಾದ ಸಂದರ್ಭದ ವೇಳೆ ಡಿ.ಕೆ. ಶಿವಕುಮಾರ್ ಅವರು ನಿವಾಸದಲ್ಲಿ ಇರಲಿಲ್ಲ. ಅದೃಷ್ಟವಶಾತ್ ಯಾರಿಗೂ, ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.

ಇದನ್ನೂ ಓದಿ : ರಾಯಚೂರು : ಹಳೇ ದ್ವೇಷಕ್ಕೆ ಗಣೇಶನ ಮೆರವಣಿಗೆಯಲ್ಲಿ ಕಲ್ಲು ತೂರಿದ ಕಿಡಿಗೇಡಿಗಳು!

Btv Kannada
Author: Btv Kannada

Read More