ರನ್ನ ಶುಗರ್ ಫ್ಯಾಕ್ಟರಿಯಿಂದ ನೂರಾರು ಕೋಟಿ ಅಕ್ರಮ ಆರೋಪ.. ಸಚಿವ ಶಿವಾನಂದ ಪಾಟೀಲ್, ಆರ್.ಬಿ ತಿಮ್ಮಾಪುರ, S.R ಪಾಟೀಲ್ ವಿರುದ್ದ ದೂರು!

ಬಾಗಲಕೋಟೆ : ಬಾಗಲಕೋಟೆಯಲ್ಲಿರುವ ರನ್ನ ಶುಗರ್ ಫ್ಯಾಕ್ಟರಿ ವಿರುದ್ದ ನೂರಾರು ಕೋಟಿ ಅಕ್ರಮ ಆರೋಪ ಕೇಳಿಬಂದಿದೆ. ಈ ಸಂಬಂಧ ಸಚಿವ ಶಿವಾನಂದ ಪಾಟೀಲ್, ಆರ್.ಬಿ ತಿಮ್ಮಾಪುರ, ಮಾಜಿ ಸಚಿವ ಎಸ್.ಆರ್ ಪಾಟೀಲ್ ಸೇರಿ ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ.

ಸರ್ಕಾರಕ್ಕೆ ಹಾಗೂ ರೈತರ ಬೊಕ್ಕಸಕ್ಕೆ ಸುಮಾರು 363 ಕೋಟಿ ರೂ. ಹಣ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಮಾಜಿ ಸಚಿವ ಎಸ್.ಆರ್ ಪಾಟೀರ್​ರಿಂದ ಹಗರಣ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ರೈತ ಸಿದ್ದಾರೂಡ ಕಂಬಳಿ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ರನ್ನ ಶುಗರ್ ಫ್ಯಾಕ್ಟರಿಯನ್ನ ಬಿಡ್ ಮೂಲಕ ಟೆಂಡರ್​ಗೆ ತೆಗೆದುಕೊಳ್ಳಲಾಗಿತ್ತು. ಮೊದಲು 471 ಕೋಟಿಗೆ ಟೆಂಡರ್ ತೆಗೆದುಕೊಂಡು ನಂತರ 108 ಕೋಟಿಗೆ ಮರು ಟೆಂಡರ್ ತೆಗೆದುಕೊಂಡು ಸರ್ಕಾರಕ್ಕೆ ಹಾಗೂ ರೈತರಿಗೆ ವಂಚಿಸಲಾಗಿದೆ. ಸುಮಾರು 363 ಕೋಟಿಗೂ ಅಧಿಕ ಹಣ ವಂಚನೆ ಮಾಡಲಾಗಿದ್ದು, ಟೆಂಡರ್ ತೆಗೆದುಕೊಂಡು ಅಕ್ರಮ ನಡೆಸಿರುವ ಬಗ್ಗೆ ಸಿದ್ದಾರೂಡ ಕಂಬಳಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ದೂರುದಾರ ಸಿದ್ದಾರೂಡ ಕಂಬಳಿ ಪ್ರತಿಕ್ರಿಯೆ : ಬಾಗಲಕೋಟೆಯಲ್ಲಿರೋ ರನ್ನ ಶುಗರ್ ಫ್ಯಾಕ್ಟರಿ ಮೂಲಕ ಮಾಜಿ ಸಚಿವ ಎಸ್ ಆರ್ ಪಾಟೀಲ್ ಹಾಗೂ ಈಗಿನ ಸಚಿವರು ಅಕ್ರಮ‌ ಎಸಗಿದ್ದಾರೆ. ಕಾನೂನು ನಿಯಮ ಉಲ್ಲಂಘಿಸಿ ಬಿಡ್ ಮಾಡಿ ಅಕ್ರಮ ಎಸಗಿದ್ದಾರೆ. ಎಸ್.ಆರ್ ಪಾಟೀಲ್ ಅವರು ಮೊದಲು 471 ಕೋಟಿಗೆ ಟೆಂಡರ್ ತೆಗೆದುಕೊಂಡಿದ್ದರು. ಕೆಲ ತಿಂಗಳ ನಂತರ ಮತ್ತೆ 108 ಕೋಟಿಗೆ ಮರು ಟೆಂಡರ್ ಪಡೆದಿದ್ದಾರೆ. ಅಕ್ರಮವಾಗಿ ಮರು ಟೆಂಡರ್ ಪಡೆದು ಸರ್ಕಾರಕ್ಕೆ 360 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾರೆ. ಇದ್ರಲ್ಲಿ ಸಚಿವರಾದ ಸಚಿವ ಶಿವಾನಂದ ಪಾಟೀಲ್, ಆರ್.ಬಿ ತಿಮ್ಮಾಪುರ, ಮಾಜಿ ಸಚಿವ ಎಸ್.ಆರ್ ಪಾಟೀಲ್ ಸೇರಿ ಸರ್ಕಾರಿ ಅಧಿಕಾರಿಗಳಯ ಭಾಗಿಯಾಗಿದ್ದಾರೆ. ಅವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ‘ಲಹರಿ’ ಮ್ಯೂಸಿಕ್​ಗೆ 50 ವರ್ಷದ ಸಂಭ್ರಮ – ಪ್ರತಿಭಾನ್ವಿತರಿಗೆ ಅವಕಾಶ.. ಒಂದೇ ವರ್ಷದಲ್ಲಿ 10,000 ಹಾಡುಗಳ ನಿರ್ಮಾಣದ ಗುರಿ!

Btv Kannada
Author: Btv Kannada

Read More