‘ಸು ಫ್ರಮ್ ಸೋ’ OTT ರಿಲೀಸ್ ಡೇಟ್​ ಫೇಕ್.. ವದಂತಿಗೆ ಸ್ಪಷ್ಟನೆ ನೀಡಿದ ಜಿಯೋ ಹಾಟ್​ಸ್ಟಾರ್!​

ಕನ್ನಡದ ‘ಸು ಫ್ರಮ್ ಸೋ’ ಸಿನಿಮಾ ಥಿಯೇಟರ್​ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದು, 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಈಗ ಈ ಚಿತ್ರ ಸೆಪ್ಟೆಂಬರ್ 5ರಂದು ಒಟಿಟಿಗೆ ಬರಲಿದೆ ಎಂದು ವರದಿ ಆಗಿತ್ತು. ಆದರೆ, ಆ ರೀತಿ ಆಗಲೇ ಇಲ್ಲ. ಸಿನಿಮಾ ಸದ್ಯ (ಸೆಪ್ಟೆಂಬರ್ 5 ಬೆಳಿಗ್ಗೆ 10 ಗಂಟೆಯಾದರೂ) ಒಟಿಟಿಗೆ ಇನ್ನೂ ಕಾಲಿಟ್ಟಿಲ್ಲ. ಜಿಯೋ ಹಾಟ್​​ಸ್ಟಾರ್ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಹೀಗಾಗಿ, ಸಿನಿಮಾ ರಿಲೀಸ್ ಮತ್ತಷ್ಟು ವಿಳಂಬ ಆಗಿರಬಹುದು ಎಂದು ಅನೇಕರು ಊಹಿಸಿದ್ದಾರೆ.

‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಸಿನಿಮಾಗೆ ಬಾಯ್ಮಾತಿನ ಪ್ರಚಾರ ಸಾಕಾಯಿತು. ಈ ಚಿತ್ರವನ್ನು ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಗೆಲ್ಲಿಸಿದರು. ಈ ಕಾರಣದಿಂದಲೇ ಒಟಿಟಿ ಹಾಗೂ ಟಿವಿ ಪ್ರಸಾರ ಹಕ್ಕು ದೊಡ್ಡ ಮಟ್ಟಕ್ಕೆ ಮಾರಾಟ ಆಗಿದೆ. ಇಂದು ಸಿನಿಮಾ ಒಟಿಟಿಗೆ ಬರಲಿದೆ ಎನ್ನಲಾಗಿತ್ತು. ಆದರೆ, ಅದು ಸುಳ್ಳಾಗಿದೆ.

ಯಾವುದೇ ಸಿನಿಮಾ ಒಟಿಟಿಗೆ ರಿಲೀಸ್ ಆಗುತ್ತದೆ ಎಂದಾದರೆ ಆ ಬಗ್ಗೆ ಒಟಿಟಿ ಪ್ಲಾಟ್​ಫಾರ್ಮ್​ ಮೊದಲೇ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಮಾಹಿತಿ ನೀಡಲಾಗುತ್ತದೆ. ‘ಸು ಫ್ರಮ್ ಸೋ’ ಸಿನಿಮಾ ವಿಚಾರದಲ್ಲಿ ಜಿಯೋ ಹಾಟ್​ಸ್ಟಾರ್ ಆ ಬಗ್ಗೆ ಯಾವುದೇ ಅಪ್​​ಡೇಟ್ ನೀಡಿಲ್ಲ.

ಸೆಪ್ಟೆಂಬರ್​ನಲ್ಲಿ ಯಾವೆಲ್ಲ ಸಿನಿಮಾ, ಸೀರಿಸ್ ಹಾಗೂ ಶೋಗಳು ಬಿಡುಗಡೆ ಆಗುತ್ತಿವೆ ಎಂಬ ಬಗ್ಗೆ ಹಾಟ್​ಸ್ಟಾರ್ ಮಾಹಿತಿ ನೀಡಿದೆ. ಆದರೆ, ಇದರಲ್ಲಿ ‘ಸು ಫ್ರಮ್ ಸೋ’ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ನೂ ಕೆಲವು ವರದಿಗಳು ಸೆಪ್ಟೆಂಬರ್ 8ರಂದು ‘ಸು ಫ್ರಮ್ ಸೋ’ ಒಟಿಟಿಗೆ ಬರಲಿದೆ ಎಂದು ಹೇಳುತ್ತಿವೆ. ಆದರೆ, ಜಿಯೋ ಹಾಟ್​ಸ್ಟಾರ್ ಕಡೆಯಿಂದ ಈ ಬಗ್ಗೆ ಅಧಿಕೃತ ಘೋಷಣೆ ಆದ ಬಳಿಕವೇ ಈ ವಿಚಾರ ತಿಳಿಯಬೇಕಿದೆ.

ಇದನ್ನೂ ಓದಿ : 2 ಲಕ್ಷ ಕೊಡದಿದ್ರೆ ವಿಕ್ಟಿಮ್​ನನ್ನೇ ಆರೋಪಿ‌ ಮಾಡ್ತೀನಿ ಎಂದಿದ್ದ HC ದಯಾನಂದ್.. BTVಯಲ್ಲಿ ವೈಯಾಲಿಕಾವಲ್ ಠಾಣೆ ಲಂಚದ ಇಂಚಿಂಚೂ ಕಹಾನಿ!

Btv Kannada
Author: Btv Kannada

Read More