ಬೆಂಗಳೂರು : ವೈಯಾಲಿಕಾವಲ್ ಠಾಣೆಯ ಹೆಡ್ ಕಾನ್ಸ್ಟೇಬಲ್ ದಯಾನಂದ್ 2 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ‘ಲೋಕಾ’ ಬಲೆಗೆ ಬಿದ್ದಿದ್ದು, ಇದೀಗ ಈ ಪ್ರಕರಣದ ಇಂಚಿಂಚೂ ಮಾಹಿತಿ ಬಹಿರಂಗವಾಗಿದೆ. ವೈಯಾಲಿಕಾವಲ್ ಪೊಲೀಸ್ ಠಾಣಾಧಿಕಾರಿ ಕೆಂಪನ್ಗೌಡ ಮೇಲೂ ಆರೋಪ ಕೇಳಿಬಂದಿದ್ದು, 2 ಲಕ್ಷ ಲಂಚದ ಕೇಸಲ್ಲಿ ಠಾಣಾಧಿಕಾರಿ ಕೆಂಪನ್ಗೌಡ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಠಾಣಾಧಿಕಾರಿ ಕೆಂಪನ್ಗೌಡ ಮೇಲೆ ಕ್ರಮಕ್ಕೆ ದೂರುದಾರ ರಾಘವೇಂದ್ರ ಆಗ್ರಹಿಸಿದ್ದಾರೆ.

ಇನ್ನೂ ವಿಕ್ಟಿಮ್ನನ್ನೇ ಆರೋಪಿ ಮಾಡ್ತೀನಿ ಎಂದಿದ್ದ ಹೆಡ್ ಕಾನ್ಸ್ಟೇಬಲ್ ದಯಾನಂದ್, ಯೂಟ್ಯೂಬ್ ಚಾನಲ್ನ ರಾಘವೇಂದ್ರ ಬಳಿ 2 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು. ಸಂಘಟನೆಯ ವ್ಯಕ್ತಿಯೊಬ್ಬರ ಜೊತೆ ರಾಘವೇಂದ್ರ ಸಂದರ್ಶನ ನಡೆಸಿದ್ದರು. ಈ ವೇಳೆ ಇನ್ನೊಂದು ಸಂಘಟನೆ ಪ್ರಮುಖ ವ್ಯಕ್ತಿಯ ಬಗ್ಗೆ ಮಾತುಕತೆ ನಡೆದಿತ್ತು. ಇಂಟರ್ವ್ಯೂನಲ್ಲಿ ಆ ಸಂಘಟನೆಯ ವ್ಯಕ್ತಿಯನ್ನು ನೀಚ ಎಂಬ ಪದ ಪ್ರಯೋಗ ಮಾಡಲಾಗಿತ್ತು. ಈ ಸಂಬಂಧ ಸಂಘಟನೆಯ ಸಣ್ಣೀರಪ್ಪ ಪ್ರೈವೇಟ್ ಕಂಪ್ಲೆಂಟ್ ರಿಜಿಸ್ಟರ್ ಮಾಡಿಸಿದ್ದರು.

ಆದರೆ, FIRನಲ್ಲಿ ಸಂದರ್ಶನ ನೀಡಿದ ಸಂಘಟನೆಯ ವ್ಯಕ್ತಿಯ ಮೇಲಷ್ಟೇ ಕೇಸ್ ಆಗಿತ್ತು. ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ FIR ರಿಜಿಸ್ಟರ್ ಆಗಿತ್ತು. FIR ಆಗ್ತಿದ್ದಂತೆ HC ದಯಾನಂದ್ ಯೂಟ್ಯೂಬರ್ ರಾಘವೇಂದ್ರರನ್ನು ಠಾಣೆಗೆ ಕರೆಸಿ, ನಿನ್ನನ್ನು ಆರೋಪಿಯಾಗಿ ಕೇಸಲ್ಲಿ ಫಿಟ್ ಮಾಡ್ತೀನಿ ಅಂತ ದಯಾನಂದ್ ಬೆದರಿಕೆ ಹಾಕಿದ್ದ. ಎರಡು ಲಕ್ಷ ನೀಡಿದ್ರಷ್ಟೇ ಪ್ರಕರಣದಿಂದ ಕೈಬಿಡೋದಾಗಿ ರಾಘವೇಂದ್ರಗೆ ಬೆದರಿಸಿದ್ದ.


ಈ ನಡುವೆ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಹೆಸರನ್ನೂ ಕೂಡ ದಯಾನಂದ್ ಬಳಸಿದ್ದ. ಸರ್.. ಎಲ್ಲರಿಗೂ ಹಣ ಕೊಡ್ಬೇಕಾಗುತ್ತೆ ಎಂದಿದ್ದ ಹೆಡ್ ಕಾನ್ಸ್ಟೇಬಲ್ ದಯಾನಂದ್, ಸಬ್ ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್, ಅವರ ಮೇಲಿನವರಿಗೂ ಹಣ ಕೊಡ್ಬೇಕು, 2 ಲಕ್ಷ ಬೇಡ 1.5 ಲಕ್ಷ ಕೊಡಿ ಅಂತಾ ಕೊಡಿ ಅಂತಾ ಭಿಕ್ಷೆ ಬೇಡಿದ್ದ. ದಯಾನಂದ್ ಹಣಕ್ಕೆ ಡಿಮ್ಯಾಂಡ್ ಮಾಡಿರೋ ಸ್ಫೋಟಕ ಆಡಿಯೋ ಇದೀಗ BTVಗೆ ಲಭ್ಯ ವಾಗಿದೆ.

ಇನ್ನೂ, HC ದಯಾನಂದ್ ಅವರನ್ನ ಮುಂದೆ ಬಿಟ್ಟು ವೈಯಾಲಿಕಾವಲ್ ಇನ್ಸ್ಪೆಕ್ಟರ್ ಬಸವನಗೌಡ ಶಂಕರಗೌಡ ಪಾಲೀಲ್ ವ್ಯವಹಾರ ಮಾಡಿಸಿದ್ದು ಎನ್ನಲಾಗಿದೆ. ಹೀಗಾಗಿ ಇದೀಗ ಇನ್ಸ್ಪೆಕ್ಟರ್ ಬಸವನಗೌಡನ ಪಾತ್ರದ ಬಗ್ಗೆಯೂ ಲೋಕಾ ತನಿಖೆ ಶುರು ಮಾಡಿದೆ. 2 ಲಕ್ಷದ ಲಂಚದ ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಬಸವನಗೌಡ ಭಾಗಿಯಾಗಿರೋದು ಪಕ್ಕಾ ಎಂದು ತಿಳಿದುಬಂದಿದ್ದು, ಯಾವುದೇ ಕ್ಷಣ ಲೋಕಾ ಅಧಿಕಾರಿಗಳು ಬಸವನಗೌಡಗೆ ಶಾಕ್ ನೀಡುವ ಸಾಧ್ಯತೆಯಿದೆ.


ಇದನ್ನೂ ಓದಿ : ಪ್ಲಾಸ್ಟಿಕ್ ಗನ್ ಹಿಡಿದು ಗೋಲ್ಡ್ ಶಾಪ್ ರಾಬರಿ ಮಾಡಿದ್ದ ಗ್ಯಾಂಗ್ ಬಂಧನ!







