ಬೆಂಗಳೂರು : ಸಿಲಿಕಾನ್ ಸಿಟಿಯ ಪ್ರತಿಷ್ಠಿತ “ಗುಣಶೀಲ” ಆಸ್ಪತ್ರೆಗೆ ಇಂದು 50ನೇ ವರ್ಷದ ಸಂಭ್ರಮ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದು, 50ನೇ ವರ್ಷದ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಈ ಆಸ್ಪತ್ರೆ ನಮ್ಮ ಅಪ್ಪನ ಕಾಲದಿಂದಲೂ ಇದೆ, ಇದು ಕೃತಕ ಮಗು ಜೋಡಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಆಸ್ಪತ್ರೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗರ್ಭದ ಒಳಗೆ ಇರುವಂತಹ ಮಗುವಿಗೂ ಚಿಕಿತ್ಸೆ ಕೊಡುವ ಕೆಲಸವನ್ನು ಮಾಡ್ತಾ ಇದೆ, ಇದು ಬೆಂಗಳೂರಿಗೆ ಅತ್ಯಂತ ಪ್ರಖ್ಯಾತ ಆಸ್ಪತ್ರೆಯಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಂತರ ಗುಣಶೀಲ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಂತಾನಸಾಫಲ್ಯ ತಜ್ಞೆ ಡಾ. ದೇವಿಕಾ ಗುಣಶೀಲ ಮಾತನಾಡಿ, ಐವಿಎಫ್‍ನಿಂದ ಹಿಡಿದು ವಂಶವಾಹಿ ಪರೀಕ್ಷೆಯವರೆಗೂ ಒಂದೇ ಆಸ್ಪತ್ರೆಯಲ್ಲಿ ಸೇವೆ ನೀಡುತ್ತಿದ್ದೇವೆ. ಇದೀಗ ಆಕ್ಸಾನ್ ಚೈಲ್ಡ್ ಡೆವಲಪ್‍ಮೆಂಟ್ ಸೆಂಟರ್ ಮೂಲಕ ದೂರದರ್ಶಿತ್ವವನ್ನು ಮಗುವಿನ ಸಮಗ್ರ ಆರೋಗ್ಯ ಮತ್ತು ಬೆಳವಣಿಗೆಗೆ ವಿಸ್ತರಿಸಿದ್ದೇವೆ ಎಂದರು.
ಇದನ್ನೂ ಓದಿ : ಕಾರು-ಟ್ರಕ್ ನಡುವೆ ಭೀಕರ ಅಪಘಾತ – ಐವರು ಉದ್ಯಮಿಗಳು ಸ್ಥಳದಲ್ಲೇ ಸಾವು!







