ಜಮಖಂಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ – 22 ಬೈಕ್​​ಗಳನ್ನು ಕದ್ದಿದ್ದ ಖದೀಮ ಅರೆಸ್ಟ್!

ಬಾಗಲಕೋಟೆ : ಜಿಲ್ಲೆಯ ಜಮಖಂಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 22 ಬೈಕ್​​ಗಳನ್ನು ಕದ್ದಿದ್ದ ಖದೀಮ ಸಿದ್ದಪ್ಪ ಉಪ್ಪಲದಿನ್ನಿ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ.

ಜಮಖಂಡಿ ಶಹರ್ ಹಾಗೂ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಅಂದಾಜು 10 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 22 ಬೈಕ್​ಗಳನ್ನು ಸೀಜ್​ ಮಾಡಿದ್ದಾರೆ. ಇನಾಂ ಹಂಚಿನಾಳ ಗ್ರಾಮದ ಸಿದ್ದಪ್ಪ ಉಪ್ಪಲದಿನ್ನಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ‌.

ಬಾಗಲಕೋಟೆ ಎಸ್​ಪಿ ಸಿದ್ಧಾರ್ಥ ಗೋಯಲ್ ಮಾರ್ಗದರ್ಶನದಲ್ಲಿ ಜಮಖಂಡಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದಾನೆ.

ಇದನ್ನೂ ಓದಿ : ಕಾರು-ಟ್ರಕ್‌ ನಡುವೆ ಭೀಕರ ಅಪಘಾತ – ಐವರು ಉದ್ಯಮಿಗಳು ಸ್ಥಳದಲ್ಲೇ ಸಾವು!

Btv Kannada
Author: Btv Kannada

Read More