ಬೆಂಗಳೂರು : ಕಿರುತೆರೆ ಧಾರಾವಾಹಿ ಹಾಗೂ ʻಭರ್ಜರಿ ಬ್ಯಾಚುಲರ್ಸ್ ಸೀಸನ್ 2ʼ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಕನ್ನಡಿಗರ ಮನೆ ಮಾತಾಗಿರುವ ರಮೋಲಾ ವಿರುದ್ಧ ಇತ್ತೀಚೆಗೆ ಫಿಲ್ಮ್ ಚೇಂಬರ್‌ನಲ್ಲಿ ದೂರು ದಾಖಲಾಗಿತ್ತು. ʻರಿಚ್ಚಿʼ ಸಿನಿಮಾದ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಮೋಲಾ, ಸಿನಿಮಾ ಪ್ರಮೋಷನ್ಸ್‌ಗೆ ಬರುತ್ತಿಲ್ಲ ಎಂದು ನಿರ್ಮಾಪಕರು ದೂರು ನೀಡಿದ್ದರು.

ಇದೀಗ, ರಕ್ಷಕ್ ಬುಲೆಟ್ ಸ್ನೇಹಿತೆ, ನಟಿ ರಮೋಲಾ ಹಾಗೂ ಆಕೆಯ ತಾಯಿ ಮಾಡಿಕೊಂಡ ಅವಾಂತರವೊಂದು ಬೆಳಕಿಗೆ ಬಂದಿದೆ. ರಮೋಲಾ ತಾಯಿ ಮಾತನಾಡಿದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಆಡಿಯೋದಲ್ಲಿ ವ್ಯಕ್ತಿಯೋರ್ವನಿಗೆ ತೀವ್ರ ಅವಾಚ್ಯ ಪದಗಳಿಂದ ರಮೋಲಾ ತಾಯಿ ನಿಂದಿಸಿದ್ದಾರೆ.

ಅಪರಿಚಿತ ವ್ಯಕ್ತಿ ಹಾಗೂ ರಮೋಲಾ ತಾಯಿ ಮಧ್ಯೆ ಚೆಕ್ ವಿಚಾರಕ್ಕೆ ಸಂಭಾಷಣೆ ಶುರುವಾಗಿದ್ದು, ಆ ಬಳಿಕ ತೀರ ಕೆಟ್ಟದಾಗಿ ರಮೋಲಾ ತಾಯಿ ವ್ಯಕ್ತಿಗೆ ಬೈದಿದ್ದಾರೆ. ಸದ್ಯ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಡಿಯೋ ಕೇಳಿದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಶಾಸಕ ವೀರೇಂದ್ರ ಪಪ್ಪಿಗೆ ED ಮತ್ತೊಂದು ಶಾಕ್ – ಅಕೌಂಟ್‌ಗಳಲ್ಲಿದ್ದ ಬರೋಬ್ಬರಿ 55 ಕೋಟಿ ರೂ. ನಗದು ಫ್ರೀಜ್!







