ದೇವನಹಳ್ಳಿ : ಪೋಕ್ಸೋ ಕೇಸ್ನಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಲಂಚಕ್ಕೆ ಬೇಡಿಕೆ ಇಟ್ಟ ದೇವನಹಳ್ಳಿ ಸಬ್ ಇನ್ಸ್ಪೆಕ್ಟರ್ ಸೇರಿ ಇಬ್ಬರು ಕಾನ್ಸ್ಟೇಬಲ್ಗಳು ಲೋಕಾ ಬಲೆಗೆ ಬಿದಿದ್ದಾರೆ.
ನೊಂದ ಯುವತಿ ಕಡೆಯವರ ಬಳಿ ದೇವನಹಳ್ಳಿ ಠಾಣೆಯ ಪಿಎಸ್ಐ ಜಗದೇವಿ, ಪಿಸಿಗಳಾದ ಅಂಬರೀಶ್ ಹಾಗೂ ಮಂಜುನಾಥ್ ಅವರು 2 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಜಗದೇವಿ ಪರ ಪಿಸಿ ಅಂಬರೀಶ್ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿದ್ದಾರೆ. ಆ ಬಳಿಕ ಲಂಚಕ್ಕೆ ಬೇಡಿಕೆಯಿಟ್ಟಿದ್ದ ದೇವನಹಳ್ಳಿ ಠಾಣೆಯ ಪಿಎಸ್ಐ ಜಗದೇವಿ, ಪಿಸಿ ಮಂಜುನಾಥ್ನನ್ನು ಬಂಧಿಸಲಾಗಿದೆ.
ಮಾತುಕತೆಯಂತೆ ಹಣ ಪಡೆಯಲು PSI ಜಗದೇವಿ ಬದಲಿಗೆ ಪಿಸಿ ಅಂಬರೀಶ್ ತೆರಳಿದ್ದರು. ಅಂಬರೀಶ್ ಬಲೆಗೆ ಬೀಳ್ತಿದ್ದಂತೆ ಪಿಎಸ್ಐ ಜಗದೇವಿ ಮತ್ತು ಪಿಸಿ ಮಂಜುನಾಥ್ ಪರಾರಿ ಆಗಿದ್ದರು. ಆ ಬಳಿಕ ಪಿಎಸ್ಐ ಜಗದೇವಿ, ಪಿಸಿ ಮಂಜುನಾಥ್ನ್ನನು ಟ್ರಾಪ್ ಮಾಡಲಾಗಿದೆ. ಸದ್ಯ ಮೂವರನ್ನೂ ವಿಚಾರಣಗೆ ಒಳಪಡಿಸಲಾಗಿದೆ.
ಇದನ್ನೂ ಓದಿ : ಭಾರೀ ಮಳೆಗೆ ರಾಜಭವನದ ಬಳಿ ಧರೆಗುರುಳಿದ ಬೃಹತ್ ಮರ!







