ದರ್ಶನ್​ನ ಸಾಮಾನ್ಯನಂತೆ ನೋಡಿದ್ರೆ ಅವಾರ್ಡ್​? ಕಾರಾಗೃಹ DG ದಯಾನಂದ್ ವಿರುದ್ಧ ಸಾಲು-ಸಾಲು ಆರೋಪ ಮಾಡಿದ ದರ್ಶನ್ ಪರ ವಕೀಲ!

ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡುವಂತೆ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇದರ ವಿಚಾರಣೆಯ ವೇಳೆ ದರ್ಶನ್‌ ಪರ ವಕೀಲ ಸುನೀಲ್‌ ಕುಮಾರ್‌ ಅವರು ಕಾರಾಗೃಹ ಡಿಜಿ ದಯಾನಂದ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ.

ಈ ಹಿಂದೆ ಪೊಲೀಸ್ ಕಮಿಷನರ್ ಆಗಿದ್ದ ದಯಾನಂದ್ ಅವರೇ ಈಗ ಕಾರಾಗೃಹ ಇಲಾಖೆ ಡಿಜಿ ಆಗಿದ್ದಾರೆ. ಅವರೇ ಈ ರೀತಿ ಸ್ಟ್ರಿಕ್ಟ್ ಮಾಡ್ತಿದ್ದಾರೆ. ದಯಾನಂದ್ ಬೇರೆ ಅಧಿಕಾರಿಗಳ ಬಳಿ ಹೇಳಿದ್ದಾರೆ. ದರ್ಶನ್ ಸೆಲೆಬ್ರೆಟಿ ಸ್ಟೇಟಸ್ ಮರೆತು ಹೋಗಬೇಕು, ಆ ರೀತಿ ನೋಡಿಕೊಳ್ಳಿ. ನಾನು ನಿಮಗೆ ಏನ್ ಪ್ರಶಸ್ತಿ ಬೇಕೋ ಅದನ್ನು ಕೊಡಿಸ್ತೀನಿ ಎಂದು ಸಿಬ್ಬಂದಿಗೆ ಹೇಳಿದ್ದಾರೆ.

ದರ್ಶನ್ ಸೆಲೆಬ್ರಿಟಿಯಾದರೇನು? ಅವನಿಗೆ ಜೈಲು ಅಂದ್ರೆ ಏನು ಎಂದು ಗೊತ್ತಾಗಬೇಕು ಎಂದು ಹಾಗೆ ಮಾಡ್ತಿದ್ದಾರೆ. ಒಳಗಡೆ ಸೆಲೆಬ್ರಿಟಿ ಅನ್ನೋದನ್ನ ಮರೆತು ಹೋಗಬೇಕು, ಆ ರೀತಿ ನೋಡಿಕೊಳ್ಳಿ ಎಂದು ಜೈಲಾಧಿಕಾರಿಗಳಿಗೆ ದಯಾನಂದ ಹೇಳಿದ್ದಾರೆ.

ದಯಾನಂದ್ ಯಾಕೆ ಈ ರೀತಿ ಮಾಡ್ತಿದ್ದಾರೆ? ಯಾವ ಉದ್ದೇಶಕ್ಕೆ ದರ್ಶನ್ ವಿರುದ್ಧ ಹೀಗೆ ಮಾಡಲಾಗ್ತಿದೆ. ಹಾಗಾದರೆ ದರ್ಶನ್ ಎಲ್ಲಿರಬೇಕು? ಒಳಗಡೆ ಓರ್ವ ಆರೋಪಿಯನ್ನ ಹೇಗೆ ನಡೆಸಿಕೊಳ್ಳಬೇಕು ಅದನ್ನ ನಡೆಸಲಿ. ಒಳಗಡೆ ಆರೋಪಿಗಳನ್ನ ಸರಿಯಾಗಿ ನೋಡಿಕೊಳ್ಳಬೇಕು. ಯಾವ ಜೈಲಾದರೂ ಕೂಡ ಅಲ್ಲಿ ಆಡಳಿತ ಮಾಡಬೇಕು. ಈ ಪ್ರಕರಣದಲ್ಲಿ ಕೆಲವು ಕೆಲಸಗಳು ಉದ್ದೇಶ ಪೂರ್ವಕವಾಗಿ ನಡೀತಿವೆ ಎಂದು ದರ್ಶನ್ ಪರ ವಕೀಲ ಸುನಿಲ್ ವಾದ ಮಂಡಿಸಿದ್ದಾರೆ.

ಇನ್ನು ಬಟ್ಟೆ, ಆಹಾರ, ಹಾಸಿಗೆ, ದಿಂಬುಗಳು ಸೇರಿ ಬೆಸಿಕ್ ಸೌಲಭ್ಯಗಳನ್ನ ಸ್ವಂತವಾಗಿ ಪಡೆಯಲು ಅವಕಾಶ ನೀಡಬೇಕು. ನಾವು ದಯಾನಂದ ಅವರ ದುಡ್ಡಿನಿಂದ ಸವಲತ್ತುಗಳನ್ನು ಕೇಳುತ್ತಿಲ್ಲ. ಕಾನೂನಿನ ಅಡಿಯಲ್ಲಿ ಏನು ಕೊಡಬಹುದು ಅದನ್ನ ಕೊಡಲಿ. ಸುಪ್ರೀಂ ಕೋರ್ಟ್​ ಬೇಲ್ ಕ್ಯಾನ್ಸಲ್ ಮಾಡಿರುವ ಒಂದು‌ ವಿಚಾರ ಇಟ್ಕೊಂಡು ಇಷ್ಟೆಲ್ಲಾ ಮಾಡ್ತಿದ್ದಾರೆ. ಕಾನೂನಿನ ಅಡಿ ಏನು ನೀಡಬೇಕು ಅದನ್ನ ಕೊಡಲಿ, ಕಾನೂನು ಪಾಲಿಸಲಿ ನಮ್ಮ ಕಕ್ಷಿದಾರರಿಗೆ ಕಾನೂನಿನ ಅಡಿ ಏನು ಸವಲತ್ತುಗಳು ಸಿಗಲು ಅವಕಾಶ ಇದೆ ಎಲ್ಲವೂ ಸಿಗುವಂತೆ ಮಾಡಿ ಎಂದು ದರ್ಶನ್ ಪರ ವಕೀಲ ಸುನೀಲ್ ಸುದೀರ್ಘವಾಗಿ ವಾದ ಮಂಡಿಸಿದ್ದಾರೆ.

ಇದನ್ನೂ ಓದಿ : ಅನುಷ್ಕಾ ಶೆಟ್ಟಿ ಅಭಿನಯದ “ಘಾಟಿ” ಚಿತ್ರ ಸೆ.5ಕ್ಕೆ ರಿಲೀಸ್ – ಕರ್ನಾಟಕದಾದ್ಯಂತ ಸಿನಿಮಾ ಡಿಸ್ಟ್ರಿಬ್ಯೂಟ್ ಮಾಡ್ತಿದ್ದಾರೆ ಯಶ್ ತಾಯಿ!

Btv Kannada
Author: Btv Kannada

Read More