ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಕ್ಲೀನ್ ಚಿಟ್ ಸಿಕ್ಕಿದೆ. ಮುನಿರತ್ನ ವಿರುದ್ಧ ಮಹಿಳೆ ಮಾಡಿರುವ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಹೀಗಾಗಿ SIT ಕೋರ್ಟ್ಗೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ.
ಈ ಸಂಬಂಧ ಶಾಸಕ ಮುನಿರತ್ನ ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆ ಆದ್ಮೇಲೆ, ಡಾ. ಮಂಜುನಾಥ್ ಅವರು ಗೆದ್ದ ನಂತರ ಸತತವಾಗಿ ಅತ್ಯಾಚಾರ ಹಾಗೂ ದಲಿತ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಇದನ್ನೆಲ್ಲಾ ದೇವರೇ ನೋಡಿಕೊಳ್ಳಲಿ. ಯಾವಾಗ ಡಿ.ಕೆ ಸುರೇಶ್ ಅವರು ಸೋತರೋ ಅವಾಗಿಂದ ನನಗೆ ಸಮಸ್ಯೆಗಳು ಬರಲು ಶುರುವಾದವು. ತಲೆ ಮೇಲೆ ಮೊಟ್ಟೆ ಹೊಡೆದರು. ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸಿದರು. ನನ್ನ ಬಗ್ಗೆ ಕೆಟ್ಟದಾಗಿರುವ ಪೋಸ್ಟರ್ಗಳನ್ನು ಅಂಟಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ತುಂಬಾ ಹಿಂಸೆ ಆಗ್ತಿದೆ, ಸುಳ್ಳು ಕಂಪ್ಲೇಂಟ್ ಕೊಡೋದನ್ನು ನಿಲ್ಲಿಸ್ಬೇಕು, ಯಾರೂ ಶಾಶ್ವತ ಅಲ್ಲ. ಇದನ್ನೆಲ್ಲಾ ಎಲ್ಲಾ ದೇವರೇ ನೋಡಿಕೊಳ್ತಾರೆ ಎಂದು ಶಾಸಕ ಮುನಿರತ್ನ ಹೇಳಿದರು.
ಸುದ್ದಿಗೋಷ್ಠಿ ಕರೆದ ಶಾಸಕ ಮುನಿರತ್ನ : ಶಾಸಕ ಮುನಿರತ್ನ ವಿರುದ್ಧ ದಾಖಲಾಗಿದ್ದ ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಕ್ಲೀನ್ ಚಿಟ್ ಸಿಕ್ಕಿದ್ದು, ಈ ಬಗ್ಗೆ ಶಾಸಕ ಮುನಿರತ್ನ ಅವರು ನಾಳೆ ಬೆಳಿಗ್ಗೆ ಮಲ್ಲೇಶ್ವರಂನ ಶಾಸಕರ ಗೃಹ ಕಛೇರಿಯಲ್ಲಿ 10:30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಇದನ್ನೂ ಓದಿ : ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರದ ಟ್ರೈಲರ್ & ಹಾಡು ಟ್ರೈಲರ್ ಬಿಡುಗಡೆ – ರಿಯಲ್ ಸ್ಟಾರ್ ಉಪೇಂದ್ರ ಸಾಥ್!







