ಶಾಸಕ ಮುನಿರತ್ನಗೆ ಬಿಗ್ ರಿಲೀಫ್.. ರೇಪ್ ಕೇಸ್​ನಲ್ಲಿ ಬಿ ರಿಪೋರ್ಟ್ ಸಲ್ಲಿಸಿದ SIT!

ಬೆಂಗಳೂರು : ಶಾಸಕ ಮುನಿರತ್ನ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಆರ್​​ಎಂಸಿ ಯಾರ್ಡ್​ ಮಹಿಳೆ ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರಿಗೆ ಕ್ಲೀನ್ ಚೀಟ್ ಸಿಕ್ಕಿದೆ.

ಆರ್​​ಎಂಸಿ ಯಾರ್ಡ್​ ಮಹಿಳೆ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಎಸ್​ಐಟಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್​ ಸಲ್ಲಿಕೆ ಮಾಡಿದೆ. ಮಹಿಳೆ ಆರೋಪಕ್ಕೆ ಯಾವ ಸಾಕ್ಷಿಗಳು ಇಲ್ಲ. ಮಹಿಳೆ ಮಾತ್ರೆ ಸೇವಿಸುವ ಬಗ್ಗೆ ರಿಹರ್ಸಲ್ ಮಾಡಲಾಗಿದೆ. 8 ಬಾರಿ ರಿಹರ್ಸಲ್ ಅನ್ನು ಮಹಿಳೆ ಮಾಡಿದ್ದರು. ಅಲ್ಲದೇ ಮಹಿಳೆ ದೇಹದಲ್ಲಿ ಮಾತ್ರೆಯ ಅಂಶ ಇಲ್ಲ. ಹೀಗಾಗಿ ಎಸ್​ಐಟಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ.

ಎಸ್​​ಐಟಿಯು ಸಾಕ್ಷ್ಯಧಾರ ಕೊರತೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಮಹಿಳೆ ಮಾತ್ರೆ ಸೇವಿಸುವಾಗ 8 ಬಾರಿ ರಿಹರ್ಸಲ್ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಮಹಿಳೆ ದೇಹದಲ್ಲಿ ನಿದ್ದೆ ಮಾತ್ರೆ ಸೇವಿಸಿರುವುದಕ್ಕೆ ದೇಹದಲ್ಲಿ ಯಾವುದೇ ಅಂಶ ಇಲ್ಲ. ಶಾಸಕ ಮುನಿರತ್ನನ ವಿರುದ್ಧ ಮಹಿಳೆ ಮಾಡಿರುವ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಕೋರ್ಟ್​ಗೆ ಬಿ ರಿಪೋರ್ಟ್ ಸಲ್ಲಿಕೆ ಆಗಿದೆ.

ಇದನ್ನೂ ಓದಿ : ‘ಮಹಾನ್’ ಚಿತ್ರಕ್ಕೆ ಸಹಿ ಹಾಕಿದ ‘ಬಿಗ್​ಬಾಸ್’ ಬೆಡಗಿ ನಮ್ರತಾ ಗೌಡ!

 

Btv Kannada
Author: Btv Kannada

Read More