ಬೆಂಗಳೂರು : ಇಂದಿನಿಂದ ಗ್ರೇಟರ್ ಬೆಂಗಳೂರು (GBA) ಆಡಳಿತ ಜಾರಿಯಾಗಿದ್ದು, ಬೆಂಗಳೂರನ್ನು ಐದು ಪಾಲಿಕೆಗಳಾಗಿ ವಿಂಗಡಿಸಿ ಆಡಳಿತ ನಡೆಸಲಾಗುತ್ತದೆ. GBA 10 ವಲಯಗಳಿಗೆ ಜಂಟಿ ಆಯುಕ್ತರನ್ನು ನೇಮಿಸಿ ಸರ್ಕಾರ ಹೊರಡಿಸಿದೆ.
ಹೊಸದಾಗಿ ಜಂಟಿ ಆಯುಕ್ತರನ್ನು ನೇಮಕಗೊಳಿಸಿ ಸರ್ಕಾರ ಆದೇಶ ನೀಡಿದ್ದು, ಬೆಂಗಳೂರು ಕೇಂದ್ರ ಪಾಲಿಕೆ ವಲಯ – 1 & 2ಗೆ ರಂಗನಾಥ್ ಕೆ, ಬೆಂಗಳೂರು ಪೂರ್ವ ಪಾಲಿಕೆ ವಲಯ -1 & 2ಗೆ ದಾಕ್ಷಾಯಿಣಿ ಹಾಗೂ ಬೆಂಗಳೂರು ನಗರ ಪಶ್ಚಿಮ ಪಾಲಿಕೆ ವಲಯ -1ಗೆ ಆರತಿ ಆನಂದ್ ಅವರನ್ನು ನೇಮಕ ಮಾಡಲಾಗಿದೆ.
ಇನ್ನು ಬೆಂಗಳೂರು ನಗರ ಪಶ್ಚಿಮ ಪಾಲಿಕೆ ವಲಯ – 2 ಜಂಟಿ ಆಯುಕ್ತರಾಗಿ ಸಂಗಪ್ಪ, ಬೆಂಗಳೂರು ಉತ್ತರ ಪಾಲಿಕೆ ವಲಯ – 1 & 2ಗೆ ಮೊಹಮ್ಮದ್ ನಹೀಮ್,
ಬೆಂಗಳೂರು ದಕ್ಷಿಣ ವಲಯ – 1 ಜಂಟಿ ಆಯುಕ್ತರಾಗಿ ಮಧು ಎನ್.ಎಂ, ಬೆಂಗಳೂರು ದಕ್ಷಿಣ ಪಾಲಿಕೆ ವಲಯ – 2 ಜಂಟಿ ಆಯುಕ್ತರಾಗಿ ಸತೀಶ್ ಬಾಬು ಅವರನ್ನು
ನೇಮಿಸಿ ಸರ್ಕಾರ ಆದೇಶ ನೀಡಿದೆ.
ಇದನ್ನೂ ಓದಿ : ತಪಾಸಣೆ ನೆಪದಲ್ಲಿ ಸುಳ್ಳು ಕೇಸ್ ಬುಕ್ – ಮದ್ದೂರಿನ ಅಬಕಾರಿ ಇನ್ಸ್‌ಪೆಕ್ಟರ್ ರಂಗನಾಥ್ ವಿರುದ್ಧ ಲೋಕಾಯುಕ್ತಕ್ಕೆ ದೂರು!







