ಕಬಿನಿಯಲ್ಲಿ ನಟಿ ರಕ್ಷಿತಾ ಪ್ರೇಮ್ ಸಫಾರಿ.. ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡ ಕ್ರೇಜಿ ಕ್ವೀನ್!

ಸ್ಯಾಂಡಲ್​ವುಡ್​ ಕ್ರೇಜಿ ಕ್ವೀನ್ ನಟಿ ರಕ್ಷಿತಾ ಪ್ರೇಮ್ ಸದ್ಯ ಫ್ರೀಯಾಗಿದ್ದಾರೆ. ಅದ್ಧೂರಿಯಾಗಿ ತಮ್ಮನ ಮದುವೆ ಮಾಡಿಸಿ ಇದೀಗ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಹೌದು.. ತಮ್ಮಿಷ್ಟದ ಅಭಯಾರಣ್ಯ ಕಬಿನಿಗೆ ಭೇಟಿ ನೀಡಿದ ಅವರು, ಸುಂದರ ಪರಿಸರದಲ್ಲಿ ಒಂದಿಷ್ಟು ಅಮೂಲ್ಯ ಸಮಯ ಕಳೆದಿದ್ದಾರೆ. ಇಷ್ಟು ದಿನ ತಮ್ಮ ರಾಣಾನ ಮದುವೆ ಕೆಲಸದಲ್ಲಿ ಸಖತ್ ಬ್ಯುಸಿಯಾಗಿದ್ದ ​ನಟಿ ರಕ್ಷಿತಾ ಕಬಿನಿಗೆ ಭೇಟಿ ನೀಡಿ ಖುಷಿ ಪಟ್ಟಿದ್ದು, ಸುಂದರ ಪರಿಸರದಲ್ಲಿ ಕಳೆದ ಕ್ಷಣವನ್ನು ವಿಡಿಯೋ ಮೂಲಕ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ನಾನೇನೋ ಕಳೆದುಕೊಂಡಿದ್ದೇನೆ ಅಥವಾ ಮುಂದಿನ ಕೆಲಸಕ್ಕೆ ಇನ್ನೂ ಸಿದ್ಧವಾಗಿಲ್ಲ ಎಂದು ಭಾವಿಸಿದಾಗಲೆಲ್ಲ ನಾನು ಮೊದಲು ಹೋಗಲು ಬಯಸುವ ಸ್ಥಳ ಸಫಾರಿ. ಕಾಡಿನಲ್ಲಿ ಸಫಾರಿ ಮಾಡುವುದು ನನಗೆ ಇಷ್ಟ. ಸಫಾರಿಗಾಗಿ ನಾನು ಯಾವುದೋ ಕಾಡನ್ನು ಆಯ್ಕೆ ಮಾಡಿಕೊಳ್ಳೋದಿಲ್ಲ. ನನಗೆ ಕಬಿನಿ ತುಂಬಾ ಇಷ್ಟ. ಅಲ್ಲಿನ ತಾಜಾ ಗಾಳಿ, ಸೂರ್ಯ, ನಾನು ಭೇಟಿಯಾಗುವ ಅದ್ಭುತ ಜನರು. ವಿಶೇಷವಾಗಿ ನಮ್ಮ ಡ್ರೈವರ್ ರಘು ಅಂತ ರಕ್ಷಿತಾ ಬರೆದಿದ್ದಾರೆ.

ಇಲ್ಲಿನ ಸುಂದರ ಪ್ರಾಣಿಗಳು ನನಗೆ ಇಷ್ಟ. ನಾನು ಈ ಬಾರಿ ಹುಲಿ ರಾಣನನ್ನು ನೋಡಿದೆ. ಅವನು ತುಂಬಾ ಸುಂದರವಾಗಿದ್ದಾನೆ. ನನ್ನ ಹೃದಯದಲ್ಲಿ ಜಾಗ ಪಡೆದಿರುವ ಸ್ಥಳವೆಂದ್ರೆ ಅದು ಕಬಿನಿ ಹಿನ್ನೀರು ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ.

ಇನ್ನು ವಿಡಿಯೋದಲ್ಲಿ ರಕ್ಷಿತಾ ಜೀಪ್ ಒಳಗೆ ಕುಳಿತು ಕಬಿನಿ ಸುತ್ತೋದನ್ನು ನೋಡ್ಬಹುದು. ತಮ್ಮ ತಂಡದ ಜೊತೆ ಕಬಿನಿಗೆ ಹೋಗಿದ್ದ ರಕ್ಷಿತಾ, ಅಲ್ಲಿನ ಪರಿಸರ, ಹುಲಿ, ಆನೆ, ಆನೆ ಮರಿ, ಜಿಂಕೆ ಸೇರಿದಂತೆ ಸಾಕಷ್ಟು ಪ್ರಾಣಿಗಳನ್ನು ನೋಡಿ ಆನಂದಿಸಿದ್ದಾರೆ.  

Btv Kannada
Author: Btv Kannada

Read More