ಬೆಂಗಳೂರಿನಲ್ಲಿ ಬಿಲ್ಡರ್ ಮನೋಜ್ ಕಿಡ್ನಾಪ್ ಮಾಡಿದ್ದ ರೌಡಿಶೀಟರ್ ಗ್ಯಾಂಗ್ ಅಂದರ್!

 ಬೆಂಗಳೂರು : ಜಯನಗರದ ಬಿಲ್ಡರ್ ಮನೋಜ್ ಎಂಬವರನ್ನು ಕಿಡ್ನಾಪ್ ಮಾಡಿದ್ದ ಗ್ಯಾಂಗ್ ಒಂದನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕಿಡ್ನಾಪ್ ಮಾಡಿದ ಗ್ಯಾಂಗ್​ನಲ್ಲಿ ಇದ್ದ ಎಲ್ಲರೂ ಕೂಡ ರೌಡಿಶೀಟರ್​ಗಳಾಗಿದ್ದು, ಬಂಧಿತರಿಂದ ಕಾರು, ಮಚ್ಚು, ಲಾಂಗ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜೇಶ್ @ಅಪ್ಪಿ ಸೀನ @ಬಾಂಬೆ ಸೀನ, ಲೋಕೇಶ, ನವೀನ, ಸೋಮಯ್ಯ, ಯುಕೇಶ ಬಂಧಿತ ರೌಡಿಶೀಟರ್​​ಗಳು.

ಜಯನಗರದ ಬಿಲ್ಡರ್ ಮನೋಜ್ ಅವರನ್ನು ಕಳೆದ ವಾರ ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯಿಂದ ಕಿಡ್ನಾಪ್ ಮಾಡಲಾಗಿತ್ತು. ಕಾರಿನಲ್ಲಿ ಕರೆದೊಯ್ದು ಯಲಹಂಕದ ಮನೆಯೊಂದರಲ್ಲಿ ಕೂಡಿಹಾಕಿ 25 ಲಕ್ಷ ರೂಪಾಯಿ ನೀಡುವಂತೆ ​ಅಪ್ಪಿ ಸೀನನ ಗ್ಯಾಂಗ್​​ ಡಿಮ್ಯಾಂಡ್ ಇಟ್ಟು ಬೆದರಿಕೆ ಹಾಕಿತ್ತು.

ಮನೋಜ್ ಈ ಹಿಂದೆ ಸಿನಿಮಾ ನಿರ್ದೇಶಕ ನಂದಕಿಶೋರ್​ಗೆ 1.5 ಲಕ್ಷ ರೂ. ಹಣ ಸಾಲ ನೀಡಿದ್ದ. ಮನೋಜ್​ನ ಸ್ನೇಹಿತ ಚಂದ್ರು ಮೀಡಿಯೇಟರ್ ಆಗಿ ಹಣವನ್ನು ಕೊಡಿಸಿದ್ದ. ಆ ಬಳಿಕ ನಂದಕಿಶೋರ್ ಹಣ ವಾಪಸ್ಸು ನೀಡದೇ ಕೂತಿದ್ದರು. ಈ ವೇಳೆ ರಾಜೇಶ್ @ಅಪ್ಪಿ ಚಂದ್ರುಗೆ ಕಾಲ್ ಮಾಡಿದ್ದ.

ಇನ್ನು ನಂದಕಿಶೋರ್ ಹಣ ಕೊಡ್ತಾರೆ ಮನೋಜ್​ಗೆ ಮಹಾಲಕ್ಷ್ಮಿ ಲೇಔಟ್​ಗೆ ಹೋಗುವಂತೆ ಅಪ್ಪಿ ತಿಳಿಸಿದ್ದ. ಅದರಂತೆ ಮನೋಜ್ ತನ್ನ ಕಾರಿನಲ್ಲಿ ಮಹಾಲಕ್ಷ್ಮಿ ಲೇಔಟ್​ಗೆ ತೆರಳಿದ್ದ. ಈ ವೇಳೆ ಅಪ್ಪಿ ತನ್ನ ಗ್ಯಾಂಗ್​ನೊಂದಿಗೆ ಮನೋಜ್​ನನ್ನ ಕಿಡ್ನಾಪ್ ಮಾಡಿ‌ ಹೊತ್ತೊಯ್ದಿದ್ದ. ನಂತರ ಮನೋಜ್​ನನ್ನ ಕೂಡಿ ಹಾಕಿ 2.5 ಲಕ್ಷ ರೂಪಾಯಿ ಸುಲಿಗೆ ಮಾಡಿತ್ತು.

ಯಾರ ಬಳಿಯಾದ್ರೂ ಹೇಳಿದ್ರೆ ಕೊಲೆ ಮಾಡೋದಾಗಿ ಮನೋಜ್​ಗೆ ಬೆದರಿಕೆ ಕೂಡ ಹಾಕಲಾಗಿತ್ತು. ಇದ್ರಿಂದ ಹೆದರಿದ ಮನೋಜ್ CCB ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ CCB ಪೊಲೀಸರು, ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

ಇದನ್ನೂ ಓದಿ : ‘ಧರ್ಮಸ್ಥಳ ಚಲೋ’ ಕಾರ್ಯಕ್ರಮಕ್ಕೂ ಮುನ್ನ ‘ಕೇಸರಿ’ ಸಂಗಮ – ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಿಜೆಪಿ ಟೀಂ!

Btv Kannada
Author: Btv Kannada

Read More