ಮಂಡ್ಯ : ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಜೊತ್ತನಪುರ ಗ್ರಾಮದಲ್ಲಿ ನಡೆದಿದೆ. ಸಾರಂಗಿ ಗ್ರಾಮದ ಮಂಜಣ್ಣ(50) ಮೃತ ದುರ್ದೈವಿ.

ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ಹಾಡಿಗೆ ನೃತ್ಯ ಮಾಡುತ್ತಿದ್ದ ಮಂಜಣ್ಣ ಏಕಾಏಕಿ ಕುಸಿದುಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಕುಸಿದ ಬಿದ್ದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ : ಸದ್ದಿಲ್ಲದೇ ಹಸಮಣೆ ಏರಲು ಸಜ್ಜಾದ ಹಾಸ್ಯನಟ ಚಿಕ್ಕಣ್ಣ.. ‘ಉಪಾಧ್ಯಕ್ಷ’ನ ಕೈ ಹಿಡಿಯೋ ಹುಡುಗಿ ಇವ್ರೇ ನೋಡಿ!
Author: Btv Kannada
Post Views: 387







