ಕೋಲಾರದಲ್ಲಿ ಮುಂದುವರಿದ ‘ಕೈ’ ಕಾರ್ಯಕರ್ತರ ಕಚ್ಚಾಟ.. ಸಚಿವ ಕೆ.ಎಚ್ ಮುನಿಯಪ್ಪ ಬೆಂಬಲಿಗನ ಮೇಲೆ ಹಲ್ಲೆಗೆ ಯತ್ನ!

ಕೋಲಾರ : ಕೋಲಾರದಲ್ಲಿ ಕೈ ಕಾರ್ಯಕರ್ತರ ಕಚ್ಚಾಟ ಮುಂದುವರಿದ್ದು, ಸಚಿವ ಕೆ.ಎಚ್ ಮುನಿಯಪ್ಪ ಬೆಂಬಲಿಗನ ಮೇಲೆ ಹಲ್ಲೆಗೆ ಯತ್ನ ಮಾಡಿರುವ ಘಟನೆ ಕೋಲಾರ ತಾಲೂಕಿನ ಬೈರಂಡಹಳ್ಳಿ ಸಮೀಪ ನಡೆದಿದೆ.

ನಿನ್ನೆ ಶಾಸಕ ಕೊತ್ತೂರು ಮಂಜುನಾಥ್ ಹಾಗೂ MLC ಅನಿಲ್ ಕುಮಾರ್ ಬೈರಂಡಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಮುಖಂಡ ಮುರಳಿಗೌಡ ಕೆರೆಯ ಅಭಿವೃದ್ಧಿ ಕಾಮಗಾರಿ ಬಗ್ಗೆ ಪ್ರಶ್ನಿಸಿದ್ದಾರೆ. ಕಾಮಗಾರಿ ಎಸ್ಟಿಮೇಟ್ ಆಗಿದೆಯಾ, ಇಂಜಿನಿಯರ್ ಯಾರು ಎಂದು ಮುರಳಿಗೌಡ ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಏಕಾಏಕಿ ಮುರಳಿಗೌಡ ವಿರುದ್ದ MLC ಅನಿಲ್ ಕುಮಾರ್ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಮುಗಿಬಿದ್ದಿದ್ದಾರೆ. ಸರಿಯಾಗಿ ಮಾತಾಡು, ದೌರ್ಜನ್ಯ ಮಾಡ್ತೀಯಾ ಎಂದು ಮುರಳಿಗೌಡ ಮೇಲೆ ಕಾಲರ್ ಹಿಡಿದು, ಹಲ್ಲೆಗೆ ಯತ್ನಿಸಲಾಗಿದೆ.

ಬಳಿಕ ವೇಮಗಲ್ ಠಾಣೆಯ ಪೊಲೀಸರು ಸ್ಥಳದಿಂದ ಮುರಳಿಗೌಡನನ್ನು ವಾಪಸ್ ಕಳಿಸಿದ್ದಾರೆ. ಮುರಳಿಗೌಡ ಕಾಂಗ್ರೆಸ್ ಪರ ಕೆಲಸ ಮಾಡಿಲ್ಲ ಎಂದು MLC ಅನಿಲ್ ಕುಮಾರ್ ಬೆಂಬಲಿಗರ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ಚೆನ್ನೈನಲ್ಲಿ ಮೇಘಸ್ಫೋಟ – ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ.. ವಿಮಾನಗಳ ಮಾರ್ಗ ಬದಲಾವಣೆ!

Btv Kannada
Author: Btv Kannada

Read More