ಚೆನ್ನೈನಲ್ಲಿ ಮೇಘಸ್ಫೋಟ – ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ.. ವಿಮಾನಗಳ ಮಾರ್ಗ ಬದಲಾವಣೆ!

ಚೆನ್ನೈ : ತಮಿಳುನಾಡು ರಾಜಧಾನಿ ನಗರಿಯಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದೆ. ಶನಿವಾರ ರಾತ್ರಿ ಚೆನ್ನೈನ ಕೆಲವೆಡೆ ಮೇಘಸ್ಫೋಟ ಸಂಭವಿಸಿ ಜನಜೀವನ ಅಸ್ತವ್ಯಸ್ತವಾಗಿದೆ.


ಚೆನ್ನೈನಲ್ಲಿ ಭಾರೀಯ ಮಳೆಯಾಗುತ್ತಿದ್ದುದರಿಂದ, ಅಲ್ಲಿಗೆ ಹೊರಟಿದ್ದ ಮೂರು ವಿಮಾನಗಳನ್ನು ಬೆಂಗಳೂರಿಗೆ ಮಾರ್ಗ ಬದಲಾವಣೆ ಮಾಡಿ ಕಳುಹಿಸಲಾಗಿದೆ. ಫ್ರಾಂಕ್​ಫುರ್ಟ್, ಮಂಗಳೂರು ಮತ್ತು ನವದೆಹಲಿಯಿಂದ ಚೆನ್ನೈಗೆ ಹೋಗ್ತಿದ್ದ ವಿಮಾನಗಳಿಗೆ, ಚೆನ್ನೈನಲ್ಲಿ ಇಳಿಯಲು ಸಾಧ್ಯವಾಗದ ಕಾರಣ ಬೆಂಗಳೂರು ಏರ್​ಪೋರ್ಟ್​ಗೆ ಬರಬೇಕಾಗಿದೆ.


ಹಲವೆಡೆ 200 ಎಂಎಂಗಿಂತಲೂ ಹೆಚ್ಚು ಮಟ್ಟದ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಮಾಹಿತಿ ನೀಡಿದೆ. ಮನಾಲಿಯಲ್ಲಿ 270 ಎಂಎಂ, ನ್ಯೂ ಮನಾಲಿ ಟೌನ್​ನಲ್ಲಿ 260 ಎಂಎಂ, ವಿಮ್ಕೋ ನಗರ್​ನಲ್ಲಿ 230 ಎಂಎಂ ಮಳೆಯಾಗಿದೆ ಎಂದು ವರದಿಯಾಗಿದೆ. ಒಟ್ಟು ಆರು ಸ್ಥಳಗಳಲ್ಲಿ ಮೇಘಸ್ಫೋಟ ಸಂಭವಿಸಿದೆ ಎಂದು ಐಎಂಡಿ ಹೇಳಿದೆ.

ಇದನ್ನೂ ಓದಿ : ವಾಹನ ಸವಾರರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್​.. ಇಂದು ಮಧ್ಯ ರಾತ್ರಿಯಿಂದಲೇ ನೆಲಮಂಗಲ-ಹಾಸನ ಟೋಲ್‌ ದರ ಹೆಚ್ಚಳ!

Btv Kannada
Author: Btv Kannada

Read More