ಬಿಕಿನಿ ತೊಟ್ಟು ಸೋನು ಶ್ರೀನಿವಾಸ್ ಗೌಡ ರೀಲ್ಸ್ – ಒಕ್ಕಲಿಗ ಸಮುದಾಯದಿಂದ ಬಹಿಷ್ಕರಿಸುವಂತೆ ಶಿವಕುಮಾರ್​​ ನಾಯ್ಕ್ ಆಗ್ರಹ!

ಬೆಂಗಳೂರು : ಬಿಕಿನಿ ಹಾಕಿಕೊಂಡು ರೀಲ್ಸ್​, ವಿಡಿಯೋ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿರುವ ಸೋನು ಶ್ರೀನಿವಾಸ್ ಗೌಡ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಸೋನು ಶ್ರೀನಿವಾಸ್ ಗೌಡ ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್​​, ವೀವ್ಸ್​​ಗೋಸ್ಕರ ತುಂಡು ಬಟ್ಟೆ, ಬಿಕಿನಿ, ಜಸ್ಟ್ ಟೂ ಪೀಸ್ ಧರಿಸಿ ರೀಲ್ಸ್​​, ವಿಡಿಯೋಗಳನ್ನು ಮಾಡಿ ಅದಕ್ಕೆ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿದ್ದು, ಅದಕ್ಕೆ ಅನುಗುಣವಾಗಿ ಹಣವೂ ಖಾತೆಗೆ ಜಮೆಯಾಗುತ್ತಿದೆ.

ಇತ್ತೀಚೆಗೆ ಸೋನು ಶ್ರೀನಿವಾಸ್ ಗೌಡಗೆ ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್​​, ವೀವ್ಸ್ ಕಡಿಮೆ ಆಗಿತ್ತು. ನಿರೀಕ್ಷೆಯಂತೆ ತಮ್ಮ ವಿಡಿಯೋಗಳು ವೀಕ್ಷಣೆ ಪಡೆಯದಿದ್ದಾಗ ಸೋನು ಶ್ರೀನಿವಾಸ್ ಗೌಡ ಮತ್ತೆ ಬಿಕಿನಿ ಹಾಕಿಕೊಂಡು ರೀಲ್ಸ್​, ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಚರ್ಚೆ ಮಾಡ್ತಿದ್ದಾರೆ. ಈ ಬೆನ್ನಲ್ಲೇ ಇದೀಗ ಸಾಮಾಜಿಕ ಹೋರಾಟಗಾರ ಸಿಎಂ ಶಿವಕುಮಾರ್​ ನಾಯ್ಕ್​ ಸೋನು ಶ್ರೀನಿವಾಸ್ ಗೌಡಗೆ ಬಹಿಷ್ಕಾರ ಹಾಕಬೇಕೆಂದು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಿಎಂ ಶಿವಕುಮಾರ ನಾಯಕ್​ ಪೋಸ್ಟ್​ನಲ್ಲಿ ಏನಿದೆ? ಬಿಕಿನಿ ಹಾಕಿಕೊಂಡು ಎಲ್ಲಾ ಹುಡುಗರ ಮನಸ್ಸನ್ನು ಹಾಳು ಮಾಡುತ್ತಿರುವ ಹಾಗೂ ಅತ್ಯಾಚಾರ ಆಗಲಿಕ್ಕೆ ಪ್ರಮುಖ ಕಾರಣಕರ್ತರಾಗುತ್ತಿರುವ ಸೋನು ಶ್ರೀನಿವಾಸ್ ಗೌಡ ಅವರನ್ನು ಒಕ್ಕಲಿಗ ಜನಾಂಗದಿಂದ ಬಹಿಷ್ಕಾರ ಮಾಡಬೇಕೆಂದು ಹೇಳಿ ನಮ್ಮ ಆಗ್ರಹಎಂದು ಸಿಎಂ ಶಿವಕುಮಾರ್​  ನಾಯ್ಕ್ ಬರೆದುಕೊಂಡಿದ್ದಾರೆ.

<iframe src="https://www.facebook.com/plugins/post.php?href=https%3A%2F%2Fwww.facebook.com%2Fpermalink.php%3Fstory_fbid%3Dpfbid0229uuGioV2rTknT4wXrdR4x5DBdjr2DQ1vFSqfQEZBi6XVBQXCiJqMMTNVJtxokGol%26id%3D100063776484341&show_text=true&width=500" width="500" height="474" style="border:none;overflow:hidden" scrolling="no" frameborder="0" allowfullscreen="true" allow="autoplay; clipboard-write; encrypted-media; picture-in-picture; web-share"></iframe>

ಇದನ್ನೂ ಓದಿ : ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಹೆಸರನ್ನು ವಿರೋಧಿಸುತ್ತಾರೆ – ಬಿಜೆಪಿ ನಾಯಕರಿಗೆ ಸಿಎಂ ಸಿದ್ದು ತಿರುಗೇಟು!

Btv Kannada
Author: Btv Kannada

Read More