ಚಳಿ ತಡೆಯಕ್ಕಾಗ್ತಿಲ್ಲ.. ಪ್ಲೀಸ್.. ಬೆಡ್​ಶೀಟ್​, ಹಾಸಿಗೆ, ಬೇಲ್​ ಕೊಡಿ – ಕೋರ್ಟ್​ನಲ್ಲಿ ದರ್ಶನ್​-ಪವಿತ್ರಾ ಗೌಡ ಡಿಮ್ಯಾಂಡ್!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಮಧ್ಯೆ ಪವಿತ್ರಾ ಗೌಡ ಅವರು ಕೆಳ ಹಂತದ ಕೋರ್ಟ್​ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ದರ್ಶನ್ ದಿಂಬು-ಹಾಸಿಗೆಗಾಗಿ ಬೇಡಿಕೆ ಇಟ್ಟಿದ್ದು, ಸದ್ಯ ಇಬ್ಬರ ಅರ್ಜಿ ವಿಚಾರಣೆಯ ತೀರ್ಪು ಸೆ.2ಕ್ಕೆ ಹೊರ ಬೀಳಲಿದೆ.

ಆರೋಪಿ ದರ್ಶನ್​ಗೆ ವಿಶೇಷ ಸವಲತ್ತು ನೀಡದಂತೆ ಸುಪ್ರೀಂ ಕೋರ್ಟ್ ಖಡಕ್ ಸೂಚನೆ ಕೊಟ್ಟಿದೆ. ಹಾಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ನಿಯಮದಲ್ಲಿರುವಂತೆ ಒಂದು ಬೆಡ್​ಶೀಟ್ ಮಾತ್ರ ನೀಡಲಾಗಿದೆ. ಹೆಚ್ಚುವರಿಯಾಗಿ ಯಾವುದೇ ಬೆಡ್​ಶೀಟ್ ಕೊಟ್ಟಿಲ್ಲ. ಹಾಗಾಗಿ ದರ್ಶನ್ ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ಆಗಿದೆ.

ನಾವು ದರ್ಶನ್​ಗೆ ಮನೆ ಊಟ ಕೇಳುತ್ತಿಲ್ಲ. 5 ಸ್ಟಾರ್ ಅನುಕೂಲ ಕೂಡ ಬೇಕು ಎಂದು ಹೇಳುತ್ತಿಲ್ಲ. ದರ್ಶನ್​ಗೆ ಬೆಡ್​ಶಿಟ್, ದಿಂಬು ಕೊಡುತ್ತಿಲ್ಲ. ಕೋರ್ಟ್​ನಿಂದ ನಿರ್ದೇಶನ ತನ್ನಿ ಎಂದಿದ್ದಾರೆ ಎಂದು ದರ್ಶನ್ ಪರ ವಕೀಲ ಸುನೀಲ್‌ಕುಮಾರ್ ಸೆಷನ್ ಕೋರ್ಟ್​ನಲ್ಲಿ ವಾದ ಮಾಡಿದ್ದಾರೆ. ಈ ಅರ್ಜಿ ವಿಚಾರಣೆ ಮುಂದಕ್ಕೆ ಹಾಕಲಾಗಿದೆ. ಇನ್ನು, ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಅರ್ಜಿ ಸಲ್ಲಿಕೆ ಆಗಿತ್ತು. ಇದರ ವಿಚಾರಣೆ ಸೆ.2ಕ್ಕೆ ಮುಂದೂಡಿಕೆ ಆಗಿದೆ.

ಪವಿತ್ರಾ ಜಾಮೀನು ಅರ್ಜಿ : ಸುಪ್ರೀಂಕೋರ್ಟ್​ನಲ್ಲಿ ಪವಿತ್ರಾ ಗೌಡ ಜಾಮೀನು ರದ್ದಾಗಿದೆ. ಈ ಬೆನ್ನಲ್ಲೇ ಅವರು ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಪವಿತ್ರಾ ಪರ ವಕೀಲರು ವಾದ ಮಂಡಿಸಿದರು. ಸುಪ್ರೀಂಕೋರ್ಟ್ ಆದೇಶವನ್ನು ನಾವು ಪ್ರಶ್ನಿಸುತ್ತಿಲ್ಲ. ಆದೇಶದಲ್ಲಿ ತಾಂತ್ರಿಕ ಲೋಪವಿರುವುದರಿಂದ ಜಾಮೀನು ನೀಡಬೇಕು ಎಂದು ಬಾಲನ್ ವಾದಿಸಿದ್ದಾರೆ. ಇದಕ್ಕೆ ಪ್ರತಿವಾದಿ ಸಚಿನ್ ಆಕ್ಷೇಪ ಹೊರಹಾಕಿದ್ದಾರೆ. ಜಾಮೀನು ಅರ್ಜಿ ರದ್ದು ಮಾಡಿ ಎಂದು ಕೋರಿದ್ದಾರೆ. ಸದ್ಯ ಸೆಪ್ಟೆಂಬರ್ 2ಕ್ಕೆ ಆದೇಶ ಮುಂದೂಡಿಕೆ ಆಗಿದೆ.

ಇದನ್ನೂ ಓದಿ : ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೇರಿ ಹಲವು ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಪ್ರದಾನ!

Btv Kannada
Author: Btv Kannada

Read More