ಬೆಂಗಳೂರು : ರಾಜಭವನದ ಗಾಜಿನ ಮನೆಯಲ್ಲಿ ಇಂದು ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭ ನಡೆದಿದೆ. ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಪೊಲೀಸರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪದಕ ಪ್ರದಾನ ಮಾಡಿದ್ದಾರೆ.

ದಕ್ಷ & ಅಸಾಧಾರಣ ಸೇವೆ, ಸಲ್ಲಿಸಿರುವ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಕಾನೂನು ಸುವ್ಯವಸ್ಥೆಯ ಎಡಿಜಿಪಿ ಆರ್. ಹಿತೇಂದ್ರ, ಮುರುಗನ್, ರವಿಕಾಂತೇ ಗೌಡ ಸೇರಿ ಹಲವು ಅಧಿಕಾರಿಗಳಿಗೆ ಪದಕ ವಿತರಣೆ ಮಾಡಲಾಗಿದೆ.

ಈ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹ ಸಚಿವ ಪರಮೇಶ್ವರ್, ಅಧಿಕಾರಿಗಳು ಸೇರಿ ಹಲವರು ಭಾಗಿಯಾಗಿದ್ದರು.


ಇದನ್ನೂ ಓದಿ : ಪರಪ್ಪನ ಅಗ್ರಹಾರದಲ್ಲಿ ‘ದಾಸ’ನಿಗೆ ನರಕಯಾತನೆ – ಹೆಚ್ಚುವರಿ ಸೌಲಭ್ಯಕ್ಕೆ ದರ್ಶನ್ ವಕೀಲರಿಂದ ಅರ್ಜಿ!
Author: Btv Kannada
Post Views: 346







