ಪರಪ್ಪನ ಅಗ್ರಹಾರದಲ್ಲಿ ‘ದಾಸ’ನಿಗೆ ನರಕಯಾತನೆ – ಹೆಚ್ಚುವರಿ ಸೌಲಭ್ಯಕ್ಕೆ ದರ್ಶನ್ ವಕೀಲರಿಂದ ಅರ್ಜಿ!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಇದೀಗ ದರ್ಶನ್ ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ.

ಚಾಪೆ, ತೆಳುವಾದ ಬ್ಲಾಂಕೆಟ್ ಕೊಟ್ಟಿರುವುದರಿಂದ ಆರೋಪಿ ದರ್ಶನ್​ಗೆ ತುಂಬಾ ಕಷ್ಟವಾಗುತ್ತಿದೆ. ಹಾಗಾಗಿ ನಟನಿಗೆ ಹೆಚ್ಚುವರಿ ಸೌಲಭ್ಯ ನೀಡುವಂತೆ ಕೋರ್ಟ್​ಗೆ ಮನವಿ ಮಾಡಲು ಸಿದ್ಧತೆ ಮಾಡಲಾಗಿದ್ದು, ಎರಡು ಗಟ್ಟಿಯಾದ ಬ್ಲಾಂಕೇಟ್, ಎರಡು ದಿಂಬು ಮತ್ತು ಜೊತೆಗೆ ಮನೆಯ ಊಟಕ್ಕೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ.

ತೆಳುವಾದ ಬ್ಲಾಂಕೇಟ್ ಇಂದ ಸೆಲ್ ಅಲ್ಲಿ ಇರೋದಕ್ಕೆ ಆಗುತ್ತಿಲ್ಲ. ಹೀಗಾಗಿ ಜೈಲಿನ ಅಧಿಕಾರಿಗಳಿಗೆ ಮ್ಯಾನ್ಯುಯಲ್ ಪ್ರಕಾರ ನೀಡುವಂತೆ ಅರ್ಜಿ ಹಾಕಲಾಗಿತ್ತು. ಈ ಎಲ್ಲಾ ಸೌಲಭ್ಯಗಳು ಜೈಲಿನಲ್ಲಿ ಮ್ಯಾನ್ಯುಯಲ್ ಅಲ್ಲಿ ಇಲ್ಲ ಎಂದು ಇದನ್ನು ನಿರಾಕರಿಸಲಾಗಿದೆ. ಹೀಗಾಗಿ ಮತ್ತೆ ಕೋರ್ಟ್ ಅರ್ಜಿ ಸಲ್ಲಿಸಲು ತಯಾರಿ ಮಾಡಲಾಗಿದ್ದು, ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ.

ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ ನಟ ದರ್ಶನ್ ? ದರ್ಶನ್ ಸೇರಿ ಐವರನ್ನು ಜೈಲು ಸ್ಥಳಾಂತರ ಕೋರಿ ಅರ್ಜಿ ಸಲ್ಲಿಸಿದ್ದು, ಇಂದು 57ನೇ ಸಿಟಿ ಸಿವಿಲ್ ಕೋರ್ಟ್​ ಆದೇಶ ನೀಡುವ ಸಾಧ್ಯತೆಯಿದೆ. ದರ್ಶನ್, ಜಗದೀಶ್, ಲಕ್ಷ್ಮಣ್, ನಾಗರಾಜ್, ಪ್ರದೋಷ್​ ಶಿಫ್ಟ್ ಮಾಡಲು SPP ಪ್ರಸನ್ನ ಕುಮಾರ್ ಮೂಲಕ‌ ಜೈಲಾಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಆರೋಪಿಗಳ ಪರ ವಕೀಲರು ಈಗಾಗಲೇ ಕೋರ್ಟ್​ಗೆ ಆಕ್ಷೇಪಣೆ ಸಲ್ಲಿಸಿದ್ದು, ಇನ್ನು ಕೆಲವೇ ಹೊತ್ತಲ್ಲಿ ನಟ ದರ್ಶನ್ ಜೈಲು ಶಿಫ್ಟ್​ ಸಂಬಂಧ ಆದೇಶ ಬರಲಿದೆ.

ಇದನ್ನೂ ಓದಿ : ತಂದೆ-ಮಗ ಸೇರಿ ಯುವತಿಗೆ ಲೈಂಗಿಕ ಕಿರುಕುಳ ಆರೋಪ – ಫೋಟೋ, ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್.. ಇಬ್ಬರ ವಿರುದ್ಧ FIR ದಾಖಲು!

Btv Kannada
Author: Btv Kannada

Read More