ಬೆಂಗಳೂರು : ತಂದೆ-ಮಗ ಸೇರಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಯುವಕ ನಿರಂಜನ್ ಮತ್ತು ತಂದೆ ರಾಜಶೇಖರ್ ವಿರುದ್ಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

2020ರಲ್ಲಿ ಯುವತಿಗೆ ಪರಿಚಯವಾದ ಯುವಕ ನಿರಂಜನ್. ಬಳಿಕ ಯುವತಿಯನ್ನು ಬ್ಲ್ಯಾಕ್‌ಮೇಲ್ ಮಾಡಲು ಮುಂದಾಗಿದ್ದಾನೆ. ನಿರಂಜನ್ ಯುವತಿಯನ್ನು ತಾನು ಹೋದಲ್ಲೆಲ್ಲಾ ಕರೆದೊಯ್ದು, ಯುವತಿಯ ಸ್ಕೂಟಿಗೆ GPS ಅಳವಡಿಸಿ ಆಕೆಯನ್ನು ಫಾಲೋ ಮಾಡ್ತಿದ್ದ ಎಂದು ಆರೋಪಿಸಲಾಗಿದೆ. ಈ ವಿಚಾರ ಯುವತಿಯ ಮನೆಯವರಿಗೆ ಗೊತ್ತಾಗಿ, ನಿರಂಜನ್ ವಿರುದ್ಧ ದೂರು ದಾಖಲಿಸಿದ್ದರು. ಆ ಸಂದರ್ಭದಲ್ಲಿ ಆರೋಪಿ ಮುಂದೆ ಹೀಗೆ ಮಾಡಲ್ಲ ಎಂದು ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದ. ಆದರೆ, ಮತ್ತೆ ಯುವತಿಯ ಕಾಲೇಜ್ ಬಳಿ ಹೋಗಿ ನಿರಂಜನ್ ಟಾರ್ಚರ್ ಕೊಟ್ಟಿದ್ದಾನೆ.

ಮಾತಾಡೋ ನೆಪದಲ್ಲಿ ಖಾಸಗಿ ಹೋಟೆಲ್ಗೆ ಯುವತಿಯನ್ನು ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡು ಫೋಟೋ, ವೀಡಿಯೋ ಚಿತ್ರೀಕರಿಸಿದ ಆರೋಪವಿದೆ. ನಂತರ ಆರೋಪಿ ನಿರಂಜನ್ ತಂದೆಯೂ ಯುವತಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಮಗ ನಿರಂಜನ್ ಬಳಿಕ ತಂದೆ ರಾಜಶೇಖರ್ ಯುವತಿ ಬಳಿ ಸೆಕ್ಸ್ಗೆ ಡಿಮ್ಯಾಂಡ್ ಮಾಡಿದ್ದಾನೆ. ನಿನ್ನ ಫೋಟೋ, ವೀಡಿಯೋ ನೋಡಿದ್ದೇನೆ, ನನಗೆ ಸಹಕರಿಸು ಎಂದು ಬೆದರಿಕೆ ಹಾಕಿದ್ದು, ಈ ವೇಳೆ ನಾನು ನಿಮ್ಮ ಮಗಳ ಸಮಾನ, ವೀಡಿಯೋ ಡಿಲೀಟ್ ಮಾಡಿ ಅಂದ್ರೂ ಟಾರ್ಚರ್ ನೀಡಿರುವ ಆರೋಪ ಕೇಳಿಬಂದಿದೆ.

ಸದ್ಯ ಕಿರಾತಕ ನಿರಂಜನ್ನ್ನು ಪೊಲೀಸರು ಬಂಧಿಸಿದ್ದು, ತಂದೆ ರಾಜಶೇಖರ್ ಪರಾರಿಯಾಗಿದ್ದಾನೆ. ಈ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : “ಅರಸಯ್ಯನ ಪ್ರೇಮ ಪ್ರಸಂಗ” ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ ಯುವ ರಾಜ್ಕುಮಾರ್ – ಸೆ.19ಕ್ಕೆ ಸಿನಿಮಾ ತೆರೆಗೆ!







