ಕಲಬುರಗಿ : ಅನ್ಯಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯಿಂದಲೇ ಮಗಳ ಮರ್ಯಾದೆಗೇಡು ಹತ್ಯೆ!

ಕಲಬುರಗಿ : ಅನ್ಯಜಾತಿ ಯುವಕನನ್ನು ಲವ್ ಮಾಡಿದ್ದಕ್ಕೆ ಸ್ವಂತ ಮಗಳನ್ನು ಕೊಂದು, ಸುಟ್ಟು ಹಾಕಿ ಮರ್ಯಾದೆಗೇಡು ಹತ್ಯೆ ಮಾಡಿರುವ ಘಟನೆ ಕಲಬುರಗಿಯ ಮೇಳಕುಂದಾ (ಬಿ) ಗ್ರಾಮದಲ್ಲಿ ನಡೆದಿದೆ. 18 ವರ್ಷದ ಕವಿತಾ ಕೊಲೆಯಾದ ದುರ್ದೈವಿ.

ತಂದೆ ಶಂಕರ್ ಕೊಳ್ಳರು ಕುಟುಂಬದ ಮೇಲೂ ಕೊಲೆ ಆರೋಪ ಕೇಳಿಬಂದಿದ್ದು, ಕೊಲೆಗೆ ಸಾಥ್ ನೀಡಿದ ಆರೋಪದಲ್ಲಿ ಸಂಬಂಧಿಕರಾದ ಶರಣು, ದತ್ತು ಚೋಳಾಭರ್ಧಿ ವಿರುದ್ಧ ದೂರು ದಾಖಲಾಗಿದೆ.

ಕವಿತಾ ಕೊಳ್ಳೂರ ಪಿಯುಸಿ ಓದಲು ಕಲಬುರಗಿಗೆ ಬಂದಿದ್ದ ವೇಳೆ ಆಟೋ ಡ್ರೈವರ್​ನನ್ನು ಪ್ರೀತಿಸುತ್ತಿದ್ದಳು. ಅನ್ಯಜಾತಿ ಹುಡುಗನನ್ನು ಪ್ರೀತಿಸುತ್ತಿದ್ದ ವಿಚಾರ ಗೊತ್ತಾಗಿ ತಂದೆ, ಕವಿತಾಳ ಕಾಲೇಜು ಬಿಡಿಸಿದ್ದರು. ಕವಿತಾ ಮದುವೆ ಮಾಡಿಸಲು ಪಟ್ಟು ಹಿಡಿದಿದ್ದರಿಂದ ತಂದೆ ಬರ್ಬರವಾಗಿ ಕೊಲೆಗೈದಿದ್ದಾರೆಂಬ ಆರೋಪವಿದೆ. ಕವಿತಾಳನ್ನು ಕೊಂದು ಸುಟ್ಟು ಹಾಕಿದ ತಂದೆ ಶಂಕರ್ ಕೊಳ್ಳರು ಬಳಿಕ ಆಕೆ ವಿಷ ಕುಡಿದಿರೋದಾಗಿ ಕಥೆ ಕಟ್ಟಿದ್ದರು.

ಕೀಟನಾಶಕ ಸುರಿದು ಆತ್ಮಹತ್ಯೆ ರೀತಿ ಬಿಂಬಿಸಲು ತಂದೆ ಶಂಕ ಯತ್ನಿಸಿದ್ದ. ಆದರೆ ಪೊಲೀಸರ ತನಿಖೆ ವೇಳೆ ಮರ್ಯಾದಾಗೇಡು ಹತ್ಯೆ ಬಟಾ ಬಯಲಾಗಿದ್ದು, ಇದೀಗ ಪೊಲೀಸರು ತಂದೆ ಶಂಕರ್ ಬಂಧಿಸಿ ಇನ್ನಿಬ್ಬರ ಬಂಧನಕ್ಕೆ ಬಲೆ ಬಿಸಿದ್ದಾರೆ. ಫರಹತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ರಾಜ್ಯದ ಜನತೆಗೆ ಮತ್ತೊಂದು ಶಾಕ್ – ನಾಳೆಯಿಂದ ಆಸ್ತಿ ನೋಂದಣಿ ಶುಲ್ಕ ಡಬಲ್‌! ​

Btv Kannada
Author: Btv Kannada

Read More