ಸಾಲ ವಾಪಸ್ ಕೊಡದ್ದಕ್ಕೆ ಯುವಕನ ಕಿಡ್ನ್ಯಾಪ್ & ರಾಬರಿ – BTVಯಲ್ಲಿ ಬಜಾಜ್ ಫೈನಾನ್ಸ್ ರಿಕವರಿ ಗ್ಯಾಂಗ್ ಗೂಂಡಾಗಿರಿ ಡಿಟೇಲ್ಸ್​!

ಬೆಂಗಲೂರು : ರಾಜ್ಯದಲ್ಲಿ ಮತ್ತೆ ಪ್ರೈವೇಟ್ ಫೈನಾನ್ಸ್ ಸಿಬ್ಬಂದಿಗಳು ಗೂಂಡಾಗಿರಿ ನಡೆಸಲು ಶುರು ಮಾಡಿದ್ದಾರೆ. ಸಾಲ ವಾಪಸ್ ಕೊಟ್ಟಿಲ್ಲ ಅಂದ್ರೆ ಕಿಡ್ನ್ಯಾಪ್ ಮಾಡಿ ರಾಬರಿ ಮಾಡ್ತಿದ್ದು, ಇದೀಗ BTVಯು ಬಜಾಜ್ ಫೈನಾನ್ಸ್ ರಿಕವರಿ ಏಜೆಂಟರುಗಳ ಅಸಲೀ‌ ಮುಖವನ್ನು ಬಿಚ್ಚಿಡ್ತಿದೆ.

ಒಂದೂವರೆ ಲಕ್ಷ ಸಾಲಕ್ಕೆ ಬಜಾಜ್ ಫೈನಾನ್ಸ್ ರಿಕವರಿ ಗ್ಯಾಂಗ್ ಮೋಹನ್ ಎಂಬಾತನನ್ನು ಕಿಡ್ನ್ಯಾಪ್ ಮಾಡಿ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನ ಲಗ್ಗೆರೆ ಬಳಿ ನಡೆದಿದೆ. ಹಣ ವಾಪಸ್ ಕೊಡು..ಇಲ್ದೇ ಹೋದ್ರೆ ಬಿಡಲ್ಲ ಎಂದು ಬಜಾಜ್ ಫೈನಾನ್ಸ್ ರಿಕವರಿ ಗ್ಯಾಂಗ್ ಮೋಹನ್​ಗೆ ಧಮ್ಕಿ ಹಾಕಿದ್ದು, ಮೋಹನ್ ಲಗ್ಗೆರೆಯ ಪಾರ್ವತಿ ನಗರದ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡ್ತಿದ್ದಾರೆ. ಗುರುಶಕ್ತಿ ಫ್ಯಾಷನ್ಸ್​ನಲ್ಲಿ ಕೆಲಸ ಮಾಡ್ತಿದ್ದ ಮೋಹನ್​​ ಬಳಿ ‘ಬಜಾಜ್’ ರಾಬರಿ ಮಾಡಿದೆ.

ಬೈಕ್​​ನಲ್ಲಿ ಬಂದ ಬಜಾಜ್ ಫೈನಾನ್ಸ್ ರಿಕವರಿ ಏಜೆಂಟ್​​ಗಳು ದಾದಾಗಿರಿ ನಡೆಸಿದ್ದು, ಮೋಹನ್​ ಬಳಿಯಿದ್ದ ಮೊಬೈಲ್ ಕಸಿದು ಕಿಡ್ನ್ಯಾಪ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅಪರಿಚಿತ ಸ್ಥಳದಲ್ಲಿ ಮೋಹನ್​ನ್ನು​​ ಕೂಡಿ ಹಾಕಿ 1.5 ಲಕ್ಷ ಹಣಕ್ಕೆ ಗ್ಯಾಂಗ್ ಡಿಮ್ಯಾಂಡ್ ಮಾಡಿದೆ. ಅಸಲಿಗೆ ಮೋಹನ್​ ಬಜಾಜ್ ಫೈನಾನ್ಸ್​ನಿಂದ ಯಾವುದೇ ಸಾಲ ಪಡೆದಿಲ್ಲ. ಮೋಹನ್​ ಗೆಳತಿ ಲಕ್ಷ್ಮಿ ಬಜಾಜ್ ಫೈನಾನ್ಸ್​ನಲ್ಲಿ 1.5 ಲಕ್ಷ ಸಾಲ ಪಡೆದಿದ್ದರು. ಲಕ್ಷ್ಮಿ ಸಾಲ ಮಾಡಿದ್ದಕ್ಕೆ ಪ್ರಿಯತಮ ಮೋಹನ್​ನ್ನು ಬಜಾಜ್ ಗ್ಯಾಂಗ್  ಅಪಹರಿಸಿದೆ.

ಈ ಸಂಬಂಧ ಯಾರೇ ಫೋನ್ ಮಾಡಿದ್ರೂ ಬಜಾಜ್ ಫೈನಾನ್ಸ್ ಸಿಬ್ಬಂದಿಗಳು ಕೇರ್ ಮಾಡ್ತಿಲ್ಲ. ಹಾಗಾಗಿ ಪೊಲೀಸ್ ಕಮಿಷನರ್​ ಸಾಹೇಬ್ರೇ ಈ ಗೂಂಡಾ ಬಜಾಜ್ ಫೈನಾನ್ಸ್ ರಿಕವರಿ ಏಜೆಂಟರುಗಳನ್ನು ಅರೆಸ್ಟ್ ಮಾಡಿ.

ಇದನ್ನೂ ಓದಿ : ಬೆಂಗಳೂರಿನ ಗುರುದ್ವಾರಕ್ಕೆ ಬಾಂಬ್​ ಬೆದರಿಕೆ – ಬಾತ್ರೂಮ್‌ನಲ್ಲಿ ಸ್ಫೋಟಿಸುವುದಾಗಿ ಇ-ಮೇಲ್‌!

Btv Kannada
Author: Btv Kannada

Read More