ಅಕ್ರಮವಾಗಿ ಸಂಗ್ರಹಿಸಿದ್ದ ಮಿನಿ ಸಿಲಿಂಡರ್​ಗಳು ಸ್ಪೋಟ – 4 ಮಂದಿಗೆ ಗಂಭೀರ ಗಾಯ!

ಬಾಗಲಕೋಟೆ : ಅಕ್ರಮವಾಗಿ ಸಂಗ್ರಹಿಸಿದ್ದ ಮಿನಿ ಸಿಲಿಂಡರ್​ಗಳು ಬ್ಲಾಸ್ಟ್​ ಆಗಿರೋ ಘಟನೆ ​​​ಬಾಗಲಕೋಟೆಯ ಬಾದಾಮಿ ಪಟ್ಟಣದ ಶಿವಾಜಿ ಸರ್ಕಲ್ ಬಳಿ ನಡೆದಿದೆ.

ದಾದಾಪಿರ್ ಎಂಬುವವರಿಗೆ ಸೇರಿದ ಅಂಗಡಿಯಲ್ಲಿ ಸಂಗ್ರಹಿಸಿದ್ದ 5 ಕೆಜಿ ಸಿಲಿಂಡರ್​ಗಳು ಬ್ಲಾಸ್ಟ್ ಆಗಿವೆ. ಮೂರರಿಂದ ನಾಲ್ಕು ಸಿಲಿಂಡರ್​ಗಳು ಏಕಾಏಕಿ ಬ್ಲಾಸ್ಟ್​ ಆಗುತ್ತಿದ್ದಂತೆ ದಟ್ಟವಾದ ಬೆಂಕಿ ಆವರಿಸಿಕೊಂಡಿದೆ.

ಅಂಗಡಿ ಮಾಲೀಕ ದಾದಾಪಿರ್​​​​ ​ಸೇರಿ 4 ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಬಾದಾಮಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದೆ.

ಇದನ್ನೂ ಓದಿ : ಬಾಲಕೃಷ್ಣ ಮೊಮ್ಮಗನಿಂದ 140 ಕೋಟಿ ರೂ.ಗೆ ಸರ್ಕಾರದ ಜಮೀನು ಮಾರಾಟ – ಅಭಿಮಾನ್ ಸ್ಟುಡಿಯೋದ ಜಮೀನು ವಾಪಾಸ್​ಗೆ ರಾಜ್ಯ ಸರ್ಕಾರ ಆದೇಶ!

Btv Kannada
Author: Btv Kannada

Read More