ಬಳ್ಳಾರಿ : ಸ್ನೇಹಿತರ ಜೊತೆ ಜಾತ್ರೆಗೆ ಹೋದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಸಂಡೂರು ತಾಲೂಕಿನ ವಡ್ಡು ಗ್ರಾಮದ ನಾಗರಾಜ್ ಮೃತ ದುರ್ದೈವಿ.
ಭುಜಂಗ ನಗರದಲ್ಲಿರುವ ತಾಯಮ್ಮ ದೇವಿಯ ಜಾತ್ರೆಗೆ ಸ್ನೇಹಿತರಾದ ನಾಗರಾಜ್, ಬಸವರಾಜ್,ಹುಲುಗಪ್ಪ ಜೊತೆಯಾಗಿ ಹೋಗಿದ್ರು.
ನಿನ್ನೆ ಜಾತ್ರೆ ಮುಗಿಸಿಕೊಂಡ ಮೂವರು ತಾರಾನಗರದ ನಾರಿ ಹಳ್ಳಕ್ಕೆ ಹೋಗಿದ್ದು, ಹಳ್ಳದ ಪಕ್ಕದ ತೆಪ್ಪವನ್ನು ಪಡೆದು ನೀರಲ್ಲಿ ಸಂಚರಿಸುವಾಗ, ಹಳ್ಳದ ಮಧ್ಯಕ್ಕೆ ಹೋದ ಕೂಡಲೇ ತೆಪ್ಪದ ತುಂಬ ನೀರು ತುಂಬಿದೆ. ತೆಪ್ಪದಿಂದ ಹಾರಿ ಬಸವರಾಜ್ ಮತ್ತು ಹುಲುಗಪ್ಪ ಈಜಿ ದಡ ಸೇರಿದ್ದಾರೆ. ಆದ್ರೇ ಈಜಿ ಸುಸ್ತಾಗಿದ್ದ ನಾಗರಾಜ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ : http://‘ಡ್ಯೂಡ್’ ಚಿತ್ರದ ಹಾಡು ಬಿಡುಗಡೆ.. ನಟಿ ಮೇಘನಾ ರಾಜ್ ಸಾಥ್!

Author: Btv Kannada
Post Views: 648