ಬೆಂಗಳೂರು : ರಾತ್ರಿ ವೇಳೆ ಕುಡುಕರನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್ ಅಧಿಕಾರಿ ಮೇಲೆಯೇ ಕಾರು ಹತ್ತಿಸಲು ಯತ್ನಿಸಿರುವ ಘಟನೆ ಬೆಂಗಳೂರಿನ ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಬಾರ್ ಒಂದರ ಮುಂದೆ ಸ್ಕಾರ್ಪಿಯೋ ಕಾರಲ್ಲಿ 4-5 ಜನ ಎಣ್ಣೆ ಪಾರ್ಟಿ ಮಾಡ್ತಿದ್ದರು. ಈ ಬಗ್ಗೆ ನೈಟ್ ರೌಂಡ್ಸ್ನಲ್ಲಿದ್ದ PSI ಮುರಳಿ ಪ್ರಶ್ನೆ ಮಾಡಿದ್ದು, ಈ ವೇಳೆ ಪುಂಡರು ಕೈನಲ್ಲಿದ್ದ ಎಣ್ಣೆ ಸಮೇತ ಕಾರು ಹತ್ತಿದ್ದಾರೆ. ನಂತರ ಏಕಾಏಕಿ ಕಾರನ್ನು PSI ಮುರಳಿ ಮೇಲೆ ಹತ್ತಿಸಲು ಯತ್ನಿಸಿದ್ದಾರೆ.
PSI ಮುರಳಿ ಅವರ ಕೈಗೆ ಗಾಯವಾಗಿ ರಕ್ತ ಸುರಿದಿದೆ. ಸದ್ಯ ಈ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕಾರು ಜಾನ್ಸನ್ ಎಂಬುವವರಿಗೆ ಸೇರಿರೋದಾಗಿ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಅಭಿಮಾನ್ ಸ್ಟುಡಿಯೋದ ಜಮೀನು ‘ಅರಣ್ಯ’ ಎಂದು ಘೋಷಣೆ – ಜಾಗ ಹಿಂಪಡೆಯಲು ಸರ್ಕಾರ ನಿರ್ಧಾರ!
Author: Btv Kannada
Post Views: 240







