ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಬಸ್ ಪಲ್ಟಿ – ಇಬ್ಬರು ಸಾವು, 11 ಜನರಿಗೆ ಗಾಯ!

ಬೆಳಗಾವಿ : ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಡೆಕೊಳ್ಳ ಕ್ರಾಸ್ ಬಳಿ ನಡೆದಿದೆ.

ಮಹಾರಾಷ್ಟ್ರದ ಪುಣೆಯಲ್ಲಿವಾಸವಿರುವ ಗದಗ ನಗರದ ಹೀನಾ ಸಲೀಮಶೇಖ್‌ ಮುಲ್ಲಾ(31) ಹಾಗೂ ಧಾರವಾಡದ ಪ್ರಶಾಂತ ಮಲ್ಲಿಕಾರ್ಜುನ ಮಡಿವಾಳರ (32) ಮೃತರು. ಬಡೇಕೊಳ್ಳ ಘಾಟ್ ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದು, ಕಿರು ಸೇತುವೆ ಗೋಡೆಗೆ ಡಿಕ್ಕಿಯಾಗಿ ಮಗುಚಿ ಬಿದ್ದಿದೆ. ಈ ಅಪಘಾತದಲ್ಲಿ 11 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಹುಬ್ಬಳ್ಳಿಯಿಂದ ಪುಣೆ ಕಡೆ ಹೊರಟಿದ್ದ ಬಸ್‌ ಚಾಲಕನ ನಿಯಂತ್ರಣ ತಪ್ಪಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ಮೇಲಿನಿಂದ ಕೆಳಗೆ ಸವೀರ್‍ಸ್‌ ರಸ್ತೆಗೆ ಬಿದ್ದು ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ – ಇಂದು ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ!

Btv Kannada
Author: Btv Kannada

Read More