ಬೆಂಗಳೂರು : ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ MLA ವೀರೇಂದ್ರ ಪಪ್ಪಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತೆ ED ಕಸ್ಟಡಿಗೆ ನೀಡಿದೆ.
5 ದಿನ ಕಸ್ಟಡಿ ಅಂತ್ಯ ಹಿನ್ನೆಲೆ ಪಪ್ಪಿಯನ್ನು ED ಕೋರ್ಟ್ಗೆ ಹಾಜರುಪಡಿಸಿದ್ದು, ಇದೀಗ ವೀರೇಂದ್ರ ಪಪ್ಪಿಯನ್ನು 6 ದಿನ ಕಸ್ಟಡಿಗೆ ನೀಡಿ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಆದೇಶ ಹೊರಡಿಸಿದ್ದಾರೆ.
ಶಾಸಕ ವೀರೇಂದ್ರ ಪಪ್ಪಿ ಗೇಮಿಂಗ್ ಆ್ಯಪ್ಗಳ ಮೇಲೆ ಅನಧಿಕೃತ ಹೂಡಿಕೆ ಮಾಡಿದ್ದರು. ಈ ಕೇಸ್ ಸಂಬಂಧ ಪ್ರಭಾವಿ ರಾಜಕಾರಣಿಗಳು, IPSಗಳ ಹೂಡಿಕೆ ಬಗ್ಗೆಯೂ ತನಿಖೆ ನಡೆದಿದ್ದು, ED ಕಸ್ಟಡಿಯಲ್ಲಿ ಹಲವು ಮಹತ್ವದ ವಿಷಯಗಳನ್ನು ಪಪ್ಪಿ ಬಾಯಿ ಬಿಟ್ಟಿದ್ದಾರೆ. ಹಾಗಾಗಿ ಇನ್ನೂ ಹೆಚ್ಚಿನ ತನಿಖೆಗೆ ಪಪ್ಪಿಯನ್ನು ED ಕಸ್ಟಡಿಗೆ ಕೇಳಿದ್ದು, ED ಮನವಿಯಂತೆ ವೀರೇಂದ್ರ ಪಪ್ಪಿಯನ್ನು ಕೋರ್ಟ್ ಕಸ್ಟಡಿಗೆ ನೀಡಿದೆ.
ಶಾಸಕ ವೀರೇಂದ್ರ ಕಸ್ಟಡಿ ವಿಸ್ತರಣೆಯಿಂದ ಹಲವು ಶಾಸಕರಿಗೆ ಇನ್ನು ಸಂಕಷ್ಟ ಎದುರಾಗಲಿದೆ. ವೀರೇಂದ್ರ ಪಪ್ಪಿ ಮಾತು ಕೇಳಿ ಗೇಮಿಂಗ್ ಆ್ಯಪ್ನಲ್ಲಿ ಕೆಲವು ಅಧಿಕಾರಿಗಳು ಹೂಡಿಕೆ ಮಾಡಿದ್ದಾರೆ. IAS, KAS, IPS ಅಧಿಕಾರಿಗಳೂ ಪಪ್ಪಿ ಜೊತೆ ಹಣ ಹೂಡಿಕೆ ಮಾಡಿದ್ದು, ED ಅಧಿಕಾರಿಗಳು ವೀರೇಂದ್ರ ಪಪ್ಪಿ ಜೊತೆ ಸಂಪರ್ಕದಲ್ಲಿದ್ದ ಅಧಿಕಾರಿಗಳ ಡಿಟೇಲ್ಸ್ ತೆಗೆದಿದ್ದಾರೆ. ರಾಜಕಾರಣಿಗಳು, ಹಲವು ಯುವ ಶಾಸಕರಿಂದ ವೀರೇಂದ್ರ ಪಪ್ಪಿ ಹಣ ಹೂಡಿಕೆ ಮಾಡಿಸಿದ್ದರು. ಇಡಿ
ಹಲವು ಯುವ ಶಾಸಕರ ಕಾಲ್ ಡಿಟೇಲ್ಸ್ ತೆಗೆದಿದ್ದಾರೆ. ಇದೀಗ ವೀರೇಂದ್ರ ಪಪ್ಪಿ ಮಾತು ಕೇಳಿದ್ದ ಶಾಸಕರಿಗೆ ಸಂಕಷ್ಟ ಫಿಕ್ಸ್ ಆಗಿದೆ.
ಇನ್ನು ಪಪ್ಪಿ ಜೊತೆ ಪಾಲುದಾರರಾಗಿರುವ ಹಲವು ಉದ್ಯಮಿಗಳಿಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಮುಂದಿನ 6 ದಿನ ಪಪ್ಪಿ ಜೊತೆ ಸಂಪರ್ಕದಲ್ಲಿರುವ ಎಲ್ಲರ ವಿಚಾರಣೆ ನಡೆಯಲಿದ್ದು, ಎಲ್ಲರಿಗೂ ಇಡಿ ನೊಟೀಸ್ ನೀಡುವ ಸಾಧ್ಯತೆಯಿದೆ. ಸದ್ಯ ಪಪ್ಪಿಯ 6 ದಿನ ಕಸ್ಟಡಿ ವಿಸ್ತರಣೆಯಿಂದಾಗಿ ಹಲವರ ಎದೆಯಲ್ಲಿ ಭಯ ಶುರುವಾಗಿದೆ.
ಇದನ್ನೂ ಓದಿ : ಕೇರಳ-ಕರ್ನಾಟಕದ ಗಡಿಯಲ್ಲಿ ಭೀಕರ ಅಪಘಾತ.. ಆಟೋಗೆ KSRTC ಬಸ್ ಡಿಕ್ಕಿ – ಒಂದೇ ಕುಟುಂಬದ ಐವರು ಸಾವು!







