ಮಂಗಳೂರು : ಧರ್ಮಸ್ಥಳ ಕೇಸ್ಗೆ ಸಂಬಂಧಿಸಿದಂತೆ SIT ಕಾರ್ಯಾಚರಣೆ ನಡೆಸುತ್ತಿದ್ದು, ಬುರುಡೆ ಬುರುಡೆ ಅಂತ ಬುರುಡೆ ಬಿಟ್ಟಿದ್ದ ಗ್ಯಾಂಗ್‌ನ ಜನ್ಮ ಜಾಲಾಡುತ್ತಿದೆ. ದೂರುದಾರನನ್ನು ನೇರವಾಗಿ ತಿಮರೋಡಿ ಮನೆಗೆ ಕರೆದುಕೊಂಡು ಹೋಗಿ SIT ಅಧಿಕಾರಿಗಳು ಶೋಧ ನಡೆಸಿದ್ದಾರೆ. ತಿಮರೋಡಿ ಮನೆಯನ್ನ SIT ಇಂಚಿಂಚೂ ಸರ್ಚ್ ಮಾಡಿದ್ದು, ಈ ವೇಳೆ ಚಿನ್ನಯ್ಯನ ಮೊಬೈಲ್ ಪತ್ತೆಯಾಗಿತ್ತು.
ಇದೀಗ ಸೌಜನ್ಯ ತಾಯಿ ಬೆಳ್ತಂಗಡಿ SIT ಕಚೇರಿಗೆ ಆಗಮಿಸಿದ್ದು, ಸೌಜನ್ಯ ಪ್ರಕರಣದಲ್ಲಿ ಚಿನ್ನಯ್ಯನನ್ನು ವಿಚಾರಣೆ ಮಾಡುವಂತೆ SITಗೆ ಸೌಜನ್ಯ ತಾಯಿ ಕುಸುಮಾವತಿ ಮನವಿ ಮಾಡಿದ್ದಾರೆ.
ನನ್ನ ಮಗಳು ಸೌಜನ್ಯ ಸಾವಿನಲ್ಲಿ ಮೊದಲ ಸಾಕ್ಷಿಯಾಗಿ ಚಿನ್ನಯ್ಯ ಇದ್ದಾರೆ, ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ. ಚಿನ್ನಯ್ಯನನ್ನು ಮೊದಲು ವಿಚಾರಣೆ ನಡೆಸುವಂತೆ SITಗೆ ಕುಸುಮಾವತಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ನನಗೆ ಕಸ್ಟಡಿಯಲ್ಲಿ ಏನೇ ಆದ್ರೂ ED ಅಧಿಕಾರಿಗಳೇ ಹೊಣೆ.. ಕೋರ್ಟ್‌ನಲ್ಲಿ ಸಾಲು ಸಾಲು ಆರೋಪ ಮಾಡಿದ ಶಾಸಕ ವೀರೇಂದ್ರ ಪಪ್ಪಿ!
Author: Btv Kannada
Post Views: 353







