ಬಳ್ಳಾರಿ ಕನಕ ದುರ್ಗಮ್ಮನ ಹರಕೆ ತೀರಿಸದಕ್ಕೆ ದರ್ಶನ್‌ ಮತ್ತೆ ಜೈಲುಪಾಲಾದ್ರಾ? – ಸ್ಫೋಟಕ ಸತ್ಯ ಬಿಚ್ಚಿಟ್ಟ ಅರ್ಚಕ!

ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ನಟ ದರ್ಶನ್‌ ಅವರ ಬಿಡುಗಡೆಗಾಗಿ ಅವರ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯದಲ್ಲಿ ಹರಕೆ ಕಟ್ಟಿಕೊಂಡಿದ್ದರು. ದರ್ಶನ್‌ಗೆ ಜಾಮೀನು ಸಿಕ್ಕ ಬಳಿಕ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುವುದಾಗಿ ವಿಜಯಲಕ್ಷ್ಮಿ ಭರವಸೆ ನೀಡಿದ್ದರು. ಆದರೆ, ಬಿಡುಗಡೆಯಾದ ಬಳಿಕ ಅವರು ದೇವಸ್ಥಾನಕ್ಕೆ ಭೇಟಿ ನೀಡದೇ ಇರುವುದು ನಟನಿಗೆ ಮತ್ತಷ್ಟು ಸಂಕಷ್ಟ ತಂದಿದೆ ಎಂದು ಹೇಳಲಾಗುತ್ತಿದೆ.

ದರ್ಶನ್‌ ಜೈಲಿನಲ್ಲಿದ್ದಾಗ ವಿಜಯಲಕ್ಷ್ಮಿ ಹಲವು ಬಾರಿ ಕನಕ ದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ನಾಲ್ಕನೇ ಭೇಟಿಯ ನಂತರ ದರ್ಶನ್‌ಗೆ ಜಾಮೀನು ಮಂಜೂರಾಗಿತ್ತು. ಆದರೆ, ನಿರೀಕ್ಷೆಯಂತೆ ಅವರು ಬಿಡುಗಡೆಯಾದ ಬಳಿಕ ದೇವಾಲಯಕ್ಕೆ ಬಾರದೇ ಇದ್ದುದರಿಂದ ಈ ಚರ್ಚೆ ಶುರುವಾಗಿದೆ.

ಈ ಕುರಿತು ಮಾತನಾಡಿರುವ ದೇವಸ್ಥಾನದ ಪ್ರಧಾನ ಅರ್ಚಕ ಗಾದೆಪ್ಪವರ್‌, “ವಿಜಯಲಕ್ಷ್ಮಿ ಈ ಹಿಂದೆ ಎರಡು ಬಾರಿ ಭೇಟಿ ನೀಡಿದ್ದರು. ಬಿಡುಗಡೆಯಾದ ಮೇಲೆ ಮತ್ತೊಮ್ಮೆ ಬಂದು ಪೂಜೆ ಸಲ್ಲಿಸಲು ನಾವು ಅವರಿಗೆ ಹೇಳಿದ್ದೆವು. ಆದರೆ ದರ್ಶನ್‌ ಬಿಡುಗಡೆಯಾದ ಬಳಿಕ ವಿಜಯಲಕ್ಷ್ಮಿ ಬಂದಿಲ್ಲ. ದುರ್ಗಮ್ಮನಿಗೆ ಸಲ್ಲಿಸಿದ ಹರಕೆ ತೀರಿಸಿದರೆ ಎಲ್ಲವೂ ಪರಿಹಾರವಾಗುತ್ತದೆ ಎಂಬ ನಂಬಿಕೆ ಎಲ್ಲರಿಗೂ ಇದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಆ್ಯಂಕರ್ ಅನುಶ್ರೀ ಮನೆಯಲ್ಲಿ ಮದುವೆ ಸಂಭ್ರಮ.. ಹಳದಿ ಶಾಸ್ತ್ರದ ಫೋಟೋಸ್‌ ಇಲ್ಲಿದೆ ನೋಡಿ!

Btv Kannada
Author: Btv Kannada

Read More