ಮಂಗಳೂರು : ವಸಂತ್ ಗಿಳಿಯಾರ್ ವಿರುದ್ಧ ಧ್ವೇಷ ಭಿತ್ತಿದ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾನುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರ್ಮ ಸಂರಕ್ಷಣಾ ಸಭೆ ವೇಳೆ ಭಾಷಣ ಮಾಡಿದ ವಸಂತ್ ಗಿಳಿಯಾರ್ ಧರ್ಮಗಳ ನಡುವೆ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆಂದು ದೂರು ದಾಖಲಾಗಿದ್ದು, ಯಾವುದೇ ಕ್ಷಣದಲ್ಲಿ ವಸಂತ್ ಗಿಳಿಯಾರ್ ಅರೆಸ್ಟ್ ಆಗುವ ಸಾಧ್ಯತೆಯಿದೆ.

ಬೆಳ್ತಂಗಡಿ ಭಾಗದಲ್ಲಿ ಕ್ರೈಸ್ತ ಮಿಷನರಿಗಳ ಪ್ರಭಾವ ವಿಪರೀತವಾಗಿದೆ. ಅಲ್ಲಿನ ತುಳಸಿಕಟ್ಟೆಗಳನ್ನು ಒಡೆದು ಶಿಲುಬೆಗಳನ್ನು ಇಡುತ್ತಿದ್ದರು. ಆ ಮೂಲಕ 1980ರ ಸಂದರ್ಭದಲ್ಲಿ ಮತಾಂತರ ನಡೆಯುತ್ತಿತ್ತು. ನಂತರ 1983 ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳು ಆರಂಭ ಆದ ಮೇಲೆ ಇವುಗಳಿಗೆ ತಡೆ ಬಿದ್ದಿತು. ಆಮಿಷಗಳಿಗೆ ಬಲಿಯಾಗದಂತೆ ಧರ್ಮಸ್ಥಳ ಸಂಘಗಳು ನೋಡಿಕೊಂಡಿವೆ ಎಂದಿದ್ದಾರೆ.
ಈ ರೀತಿ ಸುಳ್ಳು ಆರೋಪ ಮಾಡಿದ ಹಿನ್ನೆಲೆ ಧರ್ಮ ಜಾತಿಗಳ ಮಧ್ಯೆ ಧ್ವೇಷ ಭಾವನೆ ಬಿತ್ತಿದ ಆರೋಪದಲ್ಲಿ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, BNS (U/s 196(1)(s) , 353(2) ಅಡಿಯಲ್ಲಿ ವಸಂತ್ ಗಿಳಿಯಾರ್ ವಿರುದ್ಧ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ : ನಾಗಭೂಷಣ್ ನೇತೃತ್ವದಲ್ಲಿ RTO ಅಧಿಕಾರಿಗಳ ವಸೂಲಿ – ನೆಲಮಂಗಲ ರಾ.ಹೆದ್ದಾರಿಯಲ್ಲಿ ಲಾರಿ ಡ್ರೈವರ್ಸ್ಗಳಿಂದ LIVE ಲಂಚ!







