ಕಲರ್ಸ್ ಕನ್ನಡದಲ್ಲಿ 2 ಶೋಗಳ ಮಹಾ ಮಿಲನ.. ಮಜಾ ಟಾಕೀಸ್ ಮತ್ತು BOYS V/S GIRLS ಭರ್ಜರಿ ಮನರಂಜನೆ!

ಕನ್ನಡ ಕಿರುತೆರೆಯ ಎರಡು ಅತಿ ದೊಡ್ಡ ಶೋಗಳು ಮಜಾ ಟಾಕೀಸ್ ಮತ್ತು Boys Vs Girls. ಇದೀಗ ಈ ಎರಡು ಶೋಗಳ ಮಹಾ ಮಿಲನವಾಗುತ್ತಿದೆ. ಈ ವಾರಾಂತ್ಯದಲ್ಲಿ ಈ ಎರಡು ಶೋಗಳು ಸುದೀರ್ಘ ಆರುಗಂಟೆಯ ಮಹಾ ಮನರಂಜನೆಯ ರಸದೌತಣವನ್ನು ನೀಡಲಿವೆ.

ಮಜಾ ಟಾಕೀಸ್ ಮತ್ತು Boys Vs Girls ಈ ಎರಡು ಶೋಗಳ “ಮಹಾ ಮಿಲನ” ಕಲರ್ಸ್ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ (ಫೆಬ್ರವರಿ 22, 23) ರಾತ್ರಿ 7:30 ಕ್ಕೆ ಪ್ರಸಾರಾವಾಗಲಿದ್ದು, ವೀಕ್ಷಕರಿಗೆ UNLIMITED MAJA ಮತ್ತು NON-STOP ENTERTAINMENT ಕೊಡಲಿದೆ. ವಾರಾಂತ್ಯದಲ್ಲಿ ಒಟ್ಟು ಆರು ಗಂಟೆಗಳ ಕಾಲ ಅಪರಿಮಿತ ಮಜಾ ಮತ್ತು ಕೊನೆಯೇ ಇಲ್ಲದಂತೆ ನಕ್ಕು ನಗಿಸುವ ಮನರಂಜನೆ ಕೊಡುವ ಈ ‘ಮಹಾ ಮಿಲನ’ದಲ್ಲಿ ಅನೇಕ ವಿಶೇಷಗಳಿವೆ.

ಯೋಗರಾಜ್ ಭಟ್ ಮತ್ತು ಸೃಜನ್ ಕಾರ್ಯಕ್ರಮದ ಜಡ್ಜ್ ಆಗಿ ಹೊಸ ಬಗೆಯ ತೀರ್ಪು ಬರೆಯಲಿದ್ದಾರೆ.
ಅಚ್ಚಕನ್ನಡದ ಕೂಸು ಅನುಪಮಾ ನಿರೂಪಣೆಯಲ್ಲಿ ಅರಳು ಹುರಿದಂತೆ ಕನ್ನಡ ನುಡಿಮುತ್ತುಗಳು ಉರುಳಿದರೆ, ಎರಡೂ ಶೋಗಳ ದೈತ್ಯ ಪ್ರತಿಭೆಗಳು ತಮ್ಮ ಸ್ಕಿಟ್ಸ್, ಗಿಮಿಕ್, ಡಾನ್ಸ್ ಮೂಲಕ ಜನರ ಮನ ಕದಿಯಲಿದ್ದಾರೆ.
‘ಮಹಾ ಶಿವರಾತ್ರಿ’ ವಿಶೇಷವಾಗಿ ಚಂದನಾ, ಐಶ್ವರ್ಯಾ ಸಿಂಧೋಗಿ ಮತ್ತು ಪ್ರಿಯಾಂಕಾ ಕಾಮತ್ ಇವರು
ಕ್ರಮವಾಗಿ ಸತಿ, ಪಾರ್ವತಿ, ಕಾಳಿಯಾಗಿ ನರ್ತಿಸಲಿದ್ದಾರೆ.

‘ಅಣ್ಣಯ್ಯ’ ಸಿನಿಮಾದ ಕಾಮಿಡಿ ಅಣಕವನ್ನು ಹಾಲಿವುಡ್​ನ “ಅವತಾರ್’ ಚಿತ್ರದ ಮಾದರಿಯಲ್ಲಿ ತೋರಿಸಿ ಮನರಂಜಿಸಿರುವುದು ಚಂದ್ರಪ್ರಭ, ಪ್ರಶಾಂತ್, ವಿವೇಕ್, ಮಿಮಿಕ್ರಿ ಗೋಪಿ. ಇನ್ನೊಂದು ವಿಶೇಷವೆಂದರೆ, “ನೊಂದ ಗಂಡಂದಿರ ಸಂಘ’ ಸ್ಕಿಟ್. ಇದರಲ್ಲಿ ತುಕಾಲಿ – ಪತ್ನಿ ಮಾನಸ, ಪಾವಗಡ ಮಂಜು -ಪತ್ನಿ ನಂದಿನಿ ಮತ್ತು ಕುರಿ ಪ್ರತಾಪ್ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸಲಿದ್ದಾರೆ. ಜೊತೆಗೆ ಹಲವಾರು ಸ್ಕಿಟ್​ಗಳು, ಡ್ಯಾನ್ಸ್ ಮತ್ತು ಗೇಮ್ಸ್ ಗಳಿಂದ ಆರು ಗಂಟೆಗಳ ಈ ಮಹಾಮಿಲನ ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರಿಗೆ ಅಪರೂಪದ ವಿಶೇಷ ಆನಂದದ ಹಬ್ಬವಾಗಿರುವುದಂತೂ ನಿಜ.

ಇದನ್ನೂ ಓದಿ : http://ಮುಡಾ ಹಗರಣದಲ್ಲಿ ತಪ್ಪು ಮಾಡಿಲ್ಲ, ಯಾವ ತನಿಖೆಗೂ ಹೆದರಲ್ಲ – ಸಚಿವ ಭೈರತಿ ಸುರೇಶ್!

Btv Kannada
Author: Btv Kannada

Read More