ನೆಲಮಂಗಲ : ಕೆಲ ದಿನಗಳ ಹಿಂದೆಯಷ್ಟೇ RTO ರಾಜಕುಮಾರನ ಕಾಮಪುರಾಣವನ್ನು BTV ಬಿಚ್ಚಿಟ್ಟು ಆತನಿಗೆ ಗೇಟ್ ಪಾಸ್ ಕೊಡ್ಸಿದೆ. ಇದೀಗ ಮತ್ತೊಂದು ನೆಲಮಂಗಲ RTO ಲಂಚಾಸುರರ ಕರ್ಮಕಾಂಡ ಬಟಾ ಬಯಲಾಗಿದೆ.

ಹೌದು.. ನೆಲಮಂಗಲದ RTO ಕಚೇರಿಯಲ್ಲಿ ಡೀಲಿಂಗ್ ನಡೆಯುತ್ತಲೇ ಇರುತ್ತದೆ. ಉತ್ತರ ಭಾರತ ಸೇರಿ ಎಲ್ಲಾ ಲಾರಿ ಡ್ರೈವರ್ಸ್ಗಳೇ RTO ಅಧಿಕಾರಿಗಳ ಟಾರ್ಗೆಟ್ ಆಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲೇ RTO ಅಧಿಕಾರಿಗಳು ಡೀಲಿಂಗ್ ಮಾಡ್ತಿದ್ದಾರೆ. ನೆಲಮಂಗಲದ RTO ಭ್ರಷ್ಟ ಅಧಿಕಾರಿಗಳು ರಾಜಕುಮಾರನ ಹೆಸರು ಹೇಳಿಕೊಂಡು ಲಕ್ಷ ಲಕ್ಷ ವಸೂಲಿ ಮಾಡ್ತಿದ್ದಾರೆ.

ನ್ಯಾಷನಲ್ ಹೈವೇಯಲ್ಲಿ ಲಾರಿಗಳನ್ನು ಅಡ್ಡಗಟ್ಟಿ ವಸೂಲಿ ದಂಧೆ ನಡೆಸ್ತಿದ್ದಾರೆ. ಅಂಚಿಪುರ, KBD ಟೋಲ್, ಪಾರ್ಲೇಜಿ ಟೋಲ್, ಮಾದಾವರ ಜಂಕ್ಷನ್, ನ್ಯಾಷನಲ್ ಹೈವೇ, ನೈಸ್ ರಸ್ತೆ ಸೇರಿ 6 ಪಾಯಿಂಟ್ಗಳೇ ಡೀಲ್ ಸ್ಪಾಟ್ ಆಗಿದೆ. ಸೀನಿಯರ್ RTO ಇನ್ಸ್ ಪೆಕ್ಟರ್ ಹೇಳ್ದಂತೆ ಜೂನಿಯರ್ಸ್ ಕೇಳಬೇಕು. ಮಂತ್ಲಿ.. ಮಂತ್ಲಿ ಕೊಟ್ರೆ ಎಲ್ಲನೂ ಓಕೆ.. ಇಲ್ಲಂದ್ರೆ ಟಾರ್ಚರ್ ಕೊಡ್ತಾರಂತೆ BTV ನೆಲಮಂಗಲದ RTO ಇನ್ಸ್ ಪೆಕ್ಟರ್ಗಳ ಕರ್ಮಕಾಂಡ ಬಯಲು ಮಾಡಿದೆ.

ನೆಲಮಂಗಲದ ರಸ್ತೆಗಳಲ್ಲಿ RTO ಅಧಿಕಾರಿಗಳ ವಸೂಲಿ ದಂಧೆ ನಡೆಸ್ತಿದ್ದು, RTO ಸೀನಿಯರ್ ಇನ್ಸ್ ಪೆಕ್ಟರ್ ನಾಗಭೂಷಣ್ ಎಂಬಾತನೇ ಲೂಟಿ ಕಥೆಯ ಮಾಸ್ಟರ್ ಮೈಂಡ್ ಆಗಿದ್ದಾನೆ. ಇನ್ಸ್ ಪೆಕ್ಟರ್ ನಾಗಭೂಷಣ್ ಹೇಳಿದ್ದಂತೆ ಜೂನಿಯರ್ಸ್ ವಸೂಲಿ ಮಾಡ್ತಾರೆ. RTO ಜೂನಿಯರ್ ಇನ್ಸ್ ಪೆಕ್ಟರ್ ಶ್ವೇತಾ & ಕಿರಣ್ ಟೀಂ ಹೇಳಿದಂತೆ ಚಾಲಕ ಶ್ರೀನಿವಾಸ್ ಮೂರ್ತಿ ವಸೂಲಿ ಮಾಡ್ತಿದ್ದು, ರೋಡಲ್ಲಿ ಎಲ್ಲೇ ನಿಲ್ಸಿದ್ರೂ ಒಂದು ಲಾರಿಗೆ 2 ಸಾವಿರ ರೂ. ಫಿಕ್ಸ್. ಗೂಡ್ಸ್ ಲಾರಿಗಳು ಬಂದ್ರೆ RTO ಆಫೀಸರ್ಸ್ ಜೀವವನ್ನೇ ಹಿಂಡ್ತಾರೆ. ತಿಂಗಳ ಮಾಮೂಲಿ ಕೊಟ್ರೇ ಎಲ್ಲೂ ಲಾರಿ ನಿಲ್ಲಿಸಿ ಪರಿಶೀಲಿಸಲ್ಲ, 1 ತಿಂಗಳಿಗೆ ಲಾರಿಯೊಂದಕ್ಕೆ 30 ಸಾವಿರ ಫಿಕ್ಸ್ ಮಾಡುತ್ತೆ. ಸೀನಿಯರ್ RTO ಇನ್ಸ್ ಪೆಕ್ಟರ್ ತಿಪ್ಪೇಸ್ವಾಮಿ ಈ ಹಣ ಕಲೆಕ್ಟ್ ಮಾಡ್ತಾರೆ. ಇನ್ಸ್ ಪೆಕ್ಟರ್ ತಿಪ್ಪೇಸ್ವಾಮಿ ಕಲೆಕ್ಟ್ ಬಗ್ಗೆ ಜೂನಿಯರ್ಸ್ ಹೇಳ್ತಾರೆ. ಲಾರಿಗಳ ಫಿಟ್ನೆಸ್ ಸರ್ಟಿಫಿಕೇಟ್, ಟ್ಯಾಕ್ಸ್, ಇನ್ಶುರೆನ್ಸ್, ಯೂನಿಫಾರಂ, ಎಮಿಷನ್, ಓವರ್ ಲೋಡ್ ಸೇರಿ ಹೀಗೆ ಹಲವು ಕಾರಣ ಹೇಳಿ ರೇಡ್ ಮಾಡ್ತಾರಂತೆ. ಇನ್ನು ಭ್ರಷ್ಟ RTO ಅಧಿಕಾರಿಗಳು 12 ವೀಲ್ಸ್ ಲಾರಿಗಳಿಗೆ ಸಪರೇಟಾಗಿ ಡೀಲಿಂಗ್ ಮಾಡ್ತಾರೆ.

RTO ಕಚೇರಿಯಲ್ಲಿ ಮಾಸ್ಟರ್ ಮೈಂಡ್ ನಾಗಭೂಷಣ್ ಆಡಿದ್ದೇ ಆಟ. ನೆಲಮಂಗಲದ RTO ಸೀನಿಯರ್ ಇನ್ಸ್ ಪೆಕ್ಟರ್ ಆಗಿರುವ ನಾಗಭೂಷಣ್ ಒಂದು ದಿನವೂ ಕಚೇರಿಗೆ ಬಂದಿಲ್ವಂತೆ. ಕಚೇರಿಗೆ ಬರ್ಲಿಲ್ಲ ಅಂದ್ರೂ ನಾಗಭೂಷಣ್ ತಿಂಗಳ ತಿಂಗಳ ಸಂಬಳ ಎಣಿಸ್ತಿದ್ದಾನೆ. ಸಾರಿಗೆ ಸಚಿವರೇ.. ರಾಮಲಿಂಗಾ ರೆಡ್ಡಿ ಸಾಹೇಬ್ರೇ ಈ ಭ್ರಷ್ಟರ ಕಹಾನಿ ನೋಡಿ. RTO ಇನ್ಸ್ ಪೆಕ್ಟರ್ ಶ್ವೇತಾ, ಕಿರಣ್, ಡ್ರೈವರ್ ಶ್ರೀನಿವಾಸ್ ಸಸ್ಪೆಂಡ್ ಯಾವಾಗ ? ಕೂಡಲೇ ಮಾಸ್ಟರ್ ಮೈಂಡ್ ನಾಗಭೂಷಣ್ ಸೇರಿ ಭ್ರಷ್ಟರನ್ನು ಸಸ್ಪೆಂಡ್ ಮಾಡಿ. ರಸ್ತೆಗಳಲ್ಲಿ ನಡೆಯುತ್ತಿರುವ RTO ಅಫೀಸರ್ಸ್ ವಸೂಲಿ ದಂಧೆಗೆ ಬ್ರೇಕ್ ಹಾಕಿ.

ಇದನ್ನೂ ಓದಿ : ಕರ್ನಾಟಕ ಹೈಕೋರ್ಟ್ಗೆ ನೂತನ ಜಡ್ಜ್ ನೇಮಕಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು!







