ಬೆಂಗಳೂರು : ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿ, IGP ಸಂದೀಪ್ ಪಾಟೀಲ್ ಅವರು ಇತ್ತೀಚೆಗೆ ಕೋಪನ್ ಹೇಗನ್ನಲ್ಲಿ ನಡೆದ ವಿಶ್ವ ಟ್ರಯಥ್ಲಾನ್ ಸ್ಪರ್ಧೆ(World Triathlon Competition)ಯಲ್ಲಿ ಭಾಗವಹಿಸಿ ಕೇಲವ 14 ಗಂಟೆ 45 ನಿಮಿಷಗಳಲ್ಲಿ ಆಳ ಸಮುದ್ರದಲ್ಲಿ 3.8km ಈಜು ಹೊಡೆದು, 180 ಕಿಲೋಮೀಟರ್ ದೂರ ಸೈಕಲ್ ತುಳಿದು, 42km ದೂರ ಓಡಿ ಸಾಧನೆ ಮಾಡಿದ್ದಾರೆ.

ಈ ಸಾಧನೆಯನ್ನು ಇದೀಗ ಮಾಜಿ ಶಿಕ್ಷಣ ಸಚಿವ, ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಶ್ಲಾಘಿಸಿದ್ದಾರೆ. ರಾಜ್ಯಕ್ಕೆ ಹೆಮ್ಮೆ ತರುವ ಸಾಧನೆ ಮಾಡಿದ IGP ಸಂದೀಪ್ ಪಾಟೀಲ್ ಅವರಿಗೆ ಸ್ವತಃ ಅವರೇ ಪೋನ್ ಮಾಡಿ ಅಭಿನಂದಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶಾಸಕ ಸುರೇಶ್ ಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಶಾಸಕ ಸುರೇಶ್ ಕುಮಾರ್ ಅಭಿನಂದನಾ ಪೊಸ್ಟ್ ಹೀಗಿದೆ : ಇವರು ನಮ್ಮ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ IGP ಸಂದೀಪ್ ಪಾಟೀಲ್.. ನಮ್ಮ ರಾಜ್ಯಕ್ಕೆ ಹೆಮ್ಮೆ ತರುವ ಸಾಧನೆಯನ್ನು ಮಾಡಿರುವ ಸಂದೀಪ್ ಪಾಟೀಲರಿಗೆ ನಾನು ಖುದ್ದಾಗಿ ಫೋನ್ ಮೂಲಕ ಅಭಿನಂದನೆ ಸಲ್ಲಿಸಿದ್ದೇನೆ. ಕೋಪನ್ ಹೇಗನ್ನಲ್ಲಿ ಇತ್ತೀಚೆಗೆ ನಡೆದ World Triathlon Competitionನಲ್ಲಿ ಭಾಗವಹಿಸಿದ್ದಸಂದೀಪ್ ಪಾಟೀಲ್, “ಸಮುದ್ರದಲ್ಲಿ 3.8 km ಈಜು ಹೊಡೆದ ನಂತರ, ತಕ್ಷಣವೇ 180 ಕಿಲೋಮೀಟರ್ ದೂರ ಸೈಕಲ್ ತುಳಿದು, ನಂತರ ತಕ್ಷಣವೇ 42km ದೂರ ಓಡಿ… ಇವೆಲ್ಲವನ್ನೂ ಕೇವಲ 14 ಗಂಟೆ 45 ನಿಮಿಷಗಳಲ್ಲಿ ಪೂರೈಸಿದ್ದಾರೆ”.

ಇದಕ್ಕಾಗಿ ಕಳೆದ ಜನವರಿ ತಿಂಗಳಿಂದ ಅವರು ಮಾಡಿರುವ ನಿರಂತರತೆ ಅವರು ಕಾಪಾಡಿಕೊಂಡಿರುವ ಶಾರೀರಿಕ ಶಿಸ್ತು ಎಲ್ಲಾ ವಿವರಗಳು ನಿಜಕ್ಕೂ ಶ್ಲಾಘನೀಯ. ಇವರ ಈ ಕಾರ್ಯ ಯುವ ಜನಾಂಗಕ್ಕೆ ಒಂದು ಪ್ರೇರಣೆ ನೀಡುವಂತಹದ್ದು, ಪೋಲಿಸ್ ಇಲಾಖೆಗೆ ಹಾಗೂ ರಾಜ್ಯಕ್ಕೆ ಹೆಮ್ಮೆ ತರುವಂತಹ ಸಾಧನೆ ಮಾಡಿರುವ ಸಂದೀಪ್ ಪಾಟೀಲ್ ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಅಕ್ಟೋಬರ್ 9ರಿಂದ 23ರವರೆಗೆ ಹಾಸನಾಂಬೆ ಉತ್ಸವ.. ಈ ಬಾರಿ ದೇವಿ ದರ್ಶನ ನಿಯಮ ಬದಲಾವಣೆ, ಪಾಸ್ ರದ್ದು!







