ಬೆಂಗಳೂರು : ಕೇಸರಿ ಶಾಲು ಹಾಕಿದ್ದಕ್ಕೆ ಕಿಡಿಗೇಡಿಗಳು ಕಿರಿಕ್ ತೆಗೆದು ವ್ಯಕ್ತಿಗೆ ಹಲ್ಲೆ ಮಾಡಿರುವ ಘಟನೆ ಕಲಾಸಿಪಾಳ್ಯದ ರಾಯಲ್ ಟ್ರಾವೆಲ್ಸ್ ಕಂಪನಿ ಬಳಿ ನಡೆದಿದೆ. ಕೇಸರಿ ಶಾಲು ಧರಿಸಿ ಕೆಲಸ ಮಾಡ್ತಿದ್ದ ನೌಕರನ ಮೇಲೆ ಇಬ್ಬರು ಕಿಡಿಗೇಡಿ ಯುವಕರಿಂದ ಈ ಹಲ್ಲೆ ನಡೆದಿದೆ. ಈ ಘಟನೆ ಇದೇ ತಿಂಗಳ 24ರಂದು ರಾತ್ರಿ 9.30ಕ್ಕೆ ನಡೆದಿದ್ದು, ಒಂದು ದಿನ ತಡವಾಗಿ ಬೆಳಕಿಗೆ ಬಂದಿದೆ.

ಕೂಲಿ ಕೆಲಸ ಮಾಡ್ತಿದ್ದವನ ಮೇಲೆ ಹಲ್ಲೆ : ಹೌದು.. ತಾನಾಯ್ತು ತನ್ನ ಕಾರ್ಯ ಆಯ್ತು ಅಂತ ಟ್ರಾವೆಲ್ಸ್ ಕಂಪನಿಯಲ್ಲಿ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕೆಲಸ ಮಾಡುತ್ತಿದ್ದ ಸುರೇಂದ್ರ ಕುಮಾರ್ ಮೇಲೆ ಕಿಡಿಗೇಡಿ ಯುವಕರು ಹಲ್ಲೆ ಮಾಡಿದ್ದಾರೆ. ಕೇಸರಿ ಶಾಲು ತಲೆಗೆ ಸುತ್ತಿಕೊಂಡು ಹಾಕಿರೋದನ್ನ ಕೂಡ್ಲೇ ತೆಗೀಬೇಕು ಎಂದು ಆವಾಜ್ ಹಾಕಿ ಬೆದರಿಸಿದ್ದಾರೆ.

ಈ ವೇಳೆ ಯಾಕೆ ಹಲ್ಲೆ ಮಾಡ್ತಿದ್ದೀರಾ ಅಂತ ತಡೆಯಲು ಹರಿಕೃಷ್ಣ ಎಂಬವರು ಮಧ್ಯ ಪ್ರವೇಶಿಸಿದ್ದಾರೆ. ಆಗ ಹರಿಕೃಷ್ಣ ಮೇಲೆಯೂ ಮುಗಿಬಿದ್ದ ಕಿಡಿಗೇಡಿಗಳು ಕೈಯಿಂದ ಹಲ್ಲೆ ಮಾಡಿದ್ದಾರೆ. ಬಾಯಿಗೆ ಬಂದಂತೆ ಅವಾಚ್ಯ ಶಬ್ದದಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ.

ಕಿಡಿಗೇಡಿಗಳ ಪೈಕಿ ಒಬ್ಬ ತಾನು ಹೋಗುವಾಗ ನನ್ನ ಹೆಸರು ಬಬ್ಲು ಏನ್ಮಾಡ್ಕೊಳ್ತಿರೋ ಮಾಡಿ ಅಂತ ಆವಾಜ್ ಹಾಕಿದ್ದನಂತೆ. ಇದೀಗ ಘಟನೆಯಲ್ಲಿ ಹಲ್ಲೆಗೊಳಗಾದ ಹರಿಕೃಷ್ಣ ಈ ಸಂಬಂಧ ಕಲಾಸಿಪಾಳ್ಯ ಠಾಣೆಗೆ ದೂರನ್ನ ನೀಡಿದ್ದಾರೆ. ಆದ್ರೆ, ಪೊಲೀಸರು ಇದು ಸಣ್ಣ ವಿಚಾರ ಸ್ವಾಮಿ ಅಂತ NCR ಮಾಡಿಕೊಂಡಿದ್ದಾರೆ. ಕಲಾಸಿಪಾಳ್ಯ ಪೊಲೀಸರು ಆರೋಪಿಗಳನ್ನ ಕರೆಸಿ ವಾರ್ನಿಂಗ್ ಅಷ್ಟೇ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣ FIR ಹಂತಕ್ಕೆ ಹೋಗಿ ಅನ್ಯಕೋಮಿನ ಪುಂಡರು ಅರೆಸ್ಟ್ ಆಗ್ಬೇಕಿತ್ತು. ಇಲ್ಲಿ ನ್ಯಾಯ-ತೀರ್ಮಾನ ಸ್ಟೇಷನ್ನಲ್ಲೇ ಮುಗಿದೋಯ್ತು. ಕೋರ್ಟು-ಕಟಕಟೆ ಯಾವ್ದೂ ಪೊಲೀಸರ ಕಣ್ಣಿಗೆ ಬಿದ್ದಿಲ್ವಾ? ಬಟ್ಟೆ ಹಾಕೋಕೂ ಈ ಪುಂಡರ ಪರ್ಮೀಷನ್ ಪಡೀಬೇಕಾ? ಇಂತಹ ಕ್ರಿಮಿಗಳನ್ನ ಈಗ್ಲೇ ಕಾನೂನಿನ ಚೌಕಟ್ಟಿನಲ್ಲಿ ಹೊಸಕಿ ಹಾಕಬೇಕು ಇಲ್ದೇ ಹೋದ್ರೆ ಎಲ್ಲಾನೂ ಮಾಫಿ ಅಂದ್ಕೊಂಡು ನಾಳೆ ಕೊಲೆನೂ ಮಾಡ್ತಾರೆ. ನಟೋರಿಯಸ್ಗಳ ಹೆಡೆಮುರಿಕಟ್ಟೋ ಕೆಲಸ ಇದೀಗ್ಲೇ ಆಗ್ಬೇಕು. ರಾಕ್ಷಸರು ಚಿಗುರೊಡೆದ್ರೆ ಮುಂದೊಂದು ದಿನ ದೇಶ ಬಿಡೋ ಕೆಲ್ಸ ನಾವ್ ಮಾಡ್ಬೇಕಾಗುತ್ತೆ. ತಕ್ಷಣವೇ ಆರೋಪಿಗಳ ಕೈಗೆ ಕೋಳ ತೊಡಿಸಿ ಜೈಲಿಗಟ್ಟಿ ಇಲ್ದೇ ಹೋದ್ರೆ ಪೊಲೀಸರ ಬಗೆಗೆ ಇರೋ ಗೌರವ ಕೂಡ ಹೋಗ್ಬಿಡುತ್ತೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ರೌಡಿಶೀಟರ್ ಬಿಕ್ಲಾ ಶಿವ ಕೊಲೆ ಪ್ರಕರಣ – ತಲೆಮರೆಸಿಕೊಂಡಿದ್ದ ಎ1 ಆರೋಪಿ ಜಗ್ಗ ಅರೆಸ್ಟ್!







