ಹಾವೇರಿ : ಡ್ಯಾನ್ಸ್ ಮಾಸ್ಟರ್ನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು-ಪುಣೆ ಹೈವೇಯಲ್ಲಿ ನಡೆದಿದೆ. ಚಿತ್ರದುರ್ಗ ಮೂಲದ ಡ್ಯಾನ್ಸ್ ಮಾಸ್ಟರ್ ಲಿಂಗೇಶ್ ಕೊಲೆಯಾದ ದುರ್ದೈವಿ.

ಹಾವೇರಿಯ ಮೊಟೆಬೆನ್ನೂರು ಬಳಿಯ NH-48 ಫ್ಲೈ ಓವರ್ ಮೇಲೆ ಡ್ಯಾನ್ಸ್ ಮಾಸ್ಟರ್ ಲಿಂಗೇಶ್ ಶವ ಪತ್ತೆಯಾಗಿದೆ. ಲಿಂಗೇಶ್ ಕತ್ತು ಕೊಯ್ದು ಕೊಲೆಗೈದ ಬಳಿಕ ಹಂತಕರು ಎಸ್ಕೇಪ್ ಆಗಿದ್ದು, ಡ್ಯಾನ್ಸ್ ಮಾಸ್ಟರ್ ಲಿಂಗೇಶ್ ಶವದ ಬಳಿ ಆತನ KTM ಬೈಕ್, ವಾಟರ್ ಬಾಟಲ್, ಹತ್ಯೆಗೆ ಬಳಸಿದ್ದ ಚಾಕು ಸೇರಿ ಹಲವು ವಸ್ತುಗಳು ಸಿಕ್ಕಿದೆ.
ಲಿಂಗೇಶ್ ನಿನ್ನೆ ಲಾಂಗ್ ಡ್ರೈವ್ ಹೋಗಿ ಬರೋದಾಗಿ ಹೇಳಿದ್ದನಂತೆ. ಡ್ಯಾನ್ಸ್ ಮಾಸ್ಟರ್ ಲಿಂಗೇಶ್ ನಿನ್ನೆ ಹುಬ್ಬಳ್ಳಿಗೂ ತೆರಳಿದ್ದ ಎನ್ನಲಾಗಿದೆ. ವಾಪಸ್ ಚಿತ್ರದುರ್ಗಕ್ಕೆ ತೆರಳುವಾಗ ಮೋಟೆಬೆನ್ನೂರು ಬಳಿ ಹತ್ಯೆ ನಡೆದಿದೆ. ಘಟನಾ ಸ್ಥಳಕ್ಕೆ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬಾಗಿನ ಸ್ವೀಕರಿಸಿ, ಕುಂಕುಮ ಇಟ್ಟ ಬಾನು ಮುಷ್ತಾಕ್.. ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನ ಸಿಕ್ಕಿರೋದು ಖುಷಿ ಎಂದ ಸಾಹಿತಿ!







