BJP ಶಾಸಕ‌ ರಾಮಮೂರ್ತಿ ನೇತೃತ್ವದಲ್ಲಿ ನಡೆಯುತ್ತಿದ್ದ ‘ಧರ್ಮಸ್ಥಳ ಚಲೋ’ ರ್‍ಯಾಲಿ ವೇಳೆ ಭೀಕರ ಅಪಘಾತ.. ಪಾದಚಾರಿ ಸಾವು!

ಬೆಂಗಳೂರು : ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ, ಸೂತ್ರಧಾರಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಇಂದು ಜಯನಗರದಿಂದ 400 ಕಾರುಗಳಲ್ಲಿ ಶಾಸಕ ಸಿ. ಕೆ. ರಾಮಮೂರ್ತಿ ಹಾಗೂ ಬೆಂಗಲಿಗರು ಧರ್ಮಯಾತ್ರೆ ಹೊರಟಿದ್ದಾರೆ.

ಈ ಮಧ್ಯೆ ‘ಧರ್ಮಸ್ಥಳ ಚಲೋ’ ಕಾರ್ ರ್‍ಯಾಲಿ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಾಸಕ ಸಿ.ಕೆ ರಾಮಮೂರ್ತಿ ಸಹೋದರ ಮುರಳಿ ಹೋಗುತ್ತಿದ್ದ  KA -05-NJ-2449 ನಂಬರಿನ ಕಾರು ಕುಣಿಗಲ್​ನ ಯಡಿಯೂರು ಸಿದ್ಧ ಲಿಂಗೇಶ್ವರ ದೇವಸ್ಥಾನ ಬಳಿ ಅಪಘಾತಕ್ಕೀಡಾಗಿದ್ದು, ಪರಿಣಾಮ ಗಂಭೀರ ಗಾಯವಾಗಿ ಪಾದಚಾರಿ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂನ ಓದಿ : ಚಿತ್ರರಂಗಕ್ಕೆ ಮತ್ತೊಂದು ಆಘಾತ.. ಖ್ಯಾತ ಪೋಷಕ ನಟ ದಿನೇಶ್ ಮಂಗಳೂರು ವಿಧಿವಶ!

Btv Kannada
Author: Btv Kannada

Read More