ಮಂಗಳೂರು : ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ಎಂ.ಡಿ ಸಮೀರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮೊಟೊ ಕೇಸ್ ದಾಖಲಾಗಿದ್ದು, ಇದೀಗ ಪೊಲೀಸರು 3ನೇ ನೋಟಿಸ್ ನೀಡುತ್ತಿದ್ದಂತೆಯೇ ಸಮೀರ್ ಎಂ.ಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

ಯೂಟ್ಯೂಬರ್ ಸಮೀರ್ ಎಂ.ಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಕೀಲರೊಂದಿಗೆ ವಿಚಾರಣೆಗೆ ಬಂದಿದ್ದಾರೆ. ಸಮೀರ್ ಎಂ.ಡಿ ವಿರುದ್ಧ AI ವಿಡಿಯೋ ಬಳಸಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿರುವ ಆರೋಪವಿದ್ದು, ಸದ್ಯ ಕೆಲವು ದಾಖಲೆಗಳ ಸಮೇತ ಠಾಣೆಗೆ ಆಗಮಿಸಿದ್ದಾರೆ.
ತನಿಖಾಧಿಕಾರಿ ನಾಗೇಶ್ ಎದುರು ಯೂಟ್ಯೂಬರ್ ಸಮೀರ್ ಹಾಜರಾಗಿದ್ದು, ಬೆಳ್ತಂಗಡಿ ಪೊಲೀಸರು ಸಮೀರ್ ಎಂ.ಡಿಯನ್ನು ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಟ್ರೇಡರ್ಸ್ಗಳಿಗೆ ನಕಲಿ ಬಿಲ್ ಕೊಟ್ಟು ಕೋಟಿ ಕೋಟಿ ಲೂಟಿ – ವಾಣಿಜ್ಯ ತೆರಿಗೆ ಇಲಾಖೆಗೆ ವಂಚಿಸಿದ ರಾಹುಲ್ ಕುಲಕರ್ಣಿ ಅರೆಸ್ಟ್!
Author: Btv Kannada
Post Views: 437







