ಕಲಬುರಗಿ : ಗುಟ್ಕಾ ತಿನ್ನಬೇಡ ಎಂದು ಅಜ್ಜಿ ಬುದ್ಧಿವಾದ ಹೇಳಿದ್ದಕ್ಕೆ ಮೊಮ್ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯ ಅಫಜಲಪುರದ ಕರ್ಜಗಿ ಗ್ರಾಮದಲ್ಲಿ ನಡೆದಿದೆ. ರೋಹಿತ್ ಮಣ್ಣಾಂಕಲಗಿ ಆತ್ಮಹತ್ಯೆ ಮಾಡಿಕೊಂಡ ಬಾಲಕ.
9ನೇ ತರಗತಿಯ ವಿದ್ಯಾರ್ಥಿ ರೋಹಿತ್ ಗುಟ್ಕಾ ತಿನ್ನುತ್ತಿದ್ದ. ಅಜ್ಜಿ ದಮಯಂತಿ 7-8 ವರ್ಷದಿಂದ ಮೊಮ್ಮಗನನ್ನ ಸಾಕಿದ್ದರು. ಹಾಗಾಗಿ ಮೊಮ್ಮಗ ಗುಟ್ಕಾ ತಿನ್ನುವ ವಿಚಾರ ತಿಳಿದು, ಅಜ್ಜಿ ದಮಯಂತಿ ಗುಟ್ಕಾ ತಿನ್ನಬೇಡ ಅಂತಾ ಬೈದಿದ್ದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗುಟ್ಕಾ ಚಟಕ್ಕೆ ಬಿದ್ದು ವಿದ್ಯಾರ್ಥಿ ಪ್ರಾಣವನ್ನೇ ಬಿಟ್ಟಿದ್ದು, ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕೆಸಿನೋ, ಆನ್ಲೈನ್ ಗೇಮ್, ಜೂಜು ನಡೆಸಿ ಅಕ್ರಮವಾಗಿ ಹತ್ತಾರು ಕೋಟಿ ಕಮಾಯಿ – ಕಡೆಗೂ ಜೈಲು ಸೇರಿದ ಚಿತ್ರದುರ್ಗ MLA ವೀರೇಂದ್ರ!
Author: Btv Kannada
Post Views: 363







