ಕೆಸಿನೋ, ಆನ್ಲೈನ್ ಗೇಮ್, ಜೂಜು ನಡೆಸಿ ಅಕ್ರಮವಾಗಿ ಹತ್ತಾರು ಕೋಟಿ ಕಮಾಯಿ – ಕಡೆಗೂ ಜೈಲು ಸೇರಿದ ಚಿತ್ರದುರ್ಗ MLA ವೀರೇಂದ್ರ!

ದೇವನಹಳ್ಳಿ : ಅಕ್ರಮ ಹಣ ವರ್ಗಾವಣೆ, ಆನ್​ಲೈನ್, ಆಫ್ ಲೈನ್ ಅಕ್ರಮ ಬೆಟ್ಟಿಂಗ್ ಕೇಸ್ ಮೇಲೆ ಚಿತ್ರದುರ್ಗ ಕಾಂಗ್ರೆಸ್ MLA ವೀರೇಂದ್ರ ಪಪ್ಪಿ ಮನೆ, ಸಂಸ್ಥೆಗಳ ಮೇಲೆ ED ದಾಳಿ ನಡೆಸಿತ್ತು. ಈ ವೇಳೆ 12 ಕೋಟಿ ನಗದು, 6 ಕೋಟಿ ಮೌಲ್ಯದ ಚಿನ್ನ ಹಾಗೂ 10 ಕೆಜಿಯಷ್ಟು ಬೆಳ್ಳಿ ಪತ್ತೆಯಾಗಿತ್ತು. ಇದೀಗ ಕೆಸಿನೋ, ಆನ್ಲೈನ್ ಗೇಮಿಂಗ್, ಜೂಜು ಮುಂತಾದ ದಂಧೆ ನಡೆಸಿ ಅಕ್ರಮವಾಗಿ ಹತ್ತಾರು ಕೋಟಿ ಮಾಡಿ ಕಡೆಗೂ ಸಿಕ್ಕಿಬಿದ್ದು ವೀರೇಂದ್ರ ಪಪ್ಪಿ ಜೈಲು ಸೇರಿದ್ದಾರೆ.

ವೀರೇಂದ್ರ ಪಪ್ಪಿಯನ್ನು ED ಅಧಿಕಾರಿಗಳು ಸಿಕ್ಕಿಂನಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ವೀರೇಂದ್ರ ಪಪ್ಪಿ ಏರ್​ಪೋರ್ಟ್​ಗೆ ಬಂದಿದ್ದು, ಇನ್ನು ವೈದ್ಯಕೀಯ ಪರೀಕ್ಷೆ ನಂತರ ED, ವೀರೇಂದ್ರ ಪಪ್ಪಿಯನ್ನು ಜಡ್ಜ್​ ಮುಂದೆ ಹಾಜರುಪಡಿಸಲಿದ್ದಾರೆ. ನ್ಯಾಯಾಧೀಶರ ಅನುಮತಿ ಪಡೆದು ED ಮತ್ತೆ ವೀರೇಂದ್ರನನ್ನು ವಶಕ್ಕೆ ಪಡೆಯಲಿದೆ.

ನ್ಯಾಯಧೀಶರ ಮುಂದೆ ಹಾಜರುಪಡಿಸಿ ಇಡಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಸಿದ್ದತೆ ನಡೆಸುತ್ತಿದ್ದು, ಈಗಾಗ್ಲೇ ಸಿಕ್ಕಿಂನಲ್ಲಿದ್ದಾಗ್ಲೇ ವೀರೇಂದ್ರ ಪಪ್ಪಿಯನ್ನು  ಪ್ರಾಥಮಿಕವಾಗಿ ವಿಚಾರಣೆ ಮಾಡಿ ಹೇಳಿಕೆ ದಾಖಲು ಮಾಡಿದ್ದಾರೆ.

ಸಹೋದರ ತಿಪ್ಪೇಸ್ವಾಮಿ ಆನ್​ಲೈನ್​ ಗೇಮಿಂಗ್ ಅಪ್ ನಡೆಸ್ತಿದ್ದ, ಆದರೆ ವೀರೇಂದ್ರ ಪಪ್ಪಿ ಎಲ್ಲಾ ಸಂಪೂರ್ಣ ನೋಡಿಕೊಳ್ತಿದ್ದರು. ವೀರೇಂದ್ರ ಪಪ್ಪಿ ಮನೆಯಲ್ಲಿ ಸಿಕ್ಕಿರುವ 12 ಕೋಟಿ ರೂ. ನಲ್ಲಿ 1 ಕೋಟಿ ರೂಪಾಯಿ ವಿದೇಶಿ ಕರೆನ್ಸಿ ಕೂಡ ಪತ್ತೆಯಾಗಿದೆ. ಪತ್ತೆಯಾದ 12 ಕೋಟಿ ನಗದು, 6 ಕೋಟಿ ಮೌಲ್ಯದ ಚಿನ್ನ, 10 ಕೆಜಿಯಷ್ಟು ಬೆಳ್ಳಿ, 17 ಬ್ಯಾಂಕ್ ಖಾತೆಗಳನ್ನು ED ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಇದನ್ನೂ ಓದಿ : ಶ್ರೀಲಂಕಾ ಬೀಚ್​ನಲ್ಲಿ ಬಿಕಿನಿ ತೊಟ್ಟು ಸೋನು ಗೌಡ ಪೋಸ್ – ಪಡ್ಡೆ ಹುಡುಗರ ನಿದ್ದೆಗೆಡಿಸಿದ ಹಾಟ್ ಬೆಡಗಿ!

Btv Kannada
Author: Btv Kannada

Read More