ಶ್ರೀಲಂಕಾ ಬೀಚ್​ನಲ್ಲಿ ಬಿಕಿನಿ ತೊಟ್ಟು ಸೋನು ಗೌಡ ಪೋಸ್ – ಪಡ್ಡೆ ಹುಡುಗರ ನಿದ್ದೆಗೆಡಿಸಿದ ಹಾಟ್ ಬೆಡಗಿ!

ರೀಲ್ಸ್ ಸ್ಟಾರ್, ಬಿಗ್ ಬಾಸ್ ಕನ್ನಡದ ಒಟಿಟಿ ಸೀಸನ್ 1ರ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ತಮ್ಮ ರೀಲ್ಸ್‌ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಲ್‌ ಚಲ್ ಎಬ್ಬಿಸುತ್ತಿದ್ದ ಸೋನು ಗೌಡ ಇದೀಗ ಬೀಚ್‌ನಲ್ಲಿ ಬಿಕಿನಿ ತೊಟ್ಟು ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಹಾಟ್‌ ಲುಕ್‌ನಲ್ಲಿ ನೋಡಿದ ನೆಟ್ಟಿಗರಿಗೆ ಕಣ್ಣು ಕುಕ್ಕುವಂತೆ ಮಾಡಿದ್ದಾರೆ. ಪಡ್ಡೆ ಹುಡುಗರು ಸೋನು ಹಾಟ್‌ನೆಸ್‌ಗೆ ಫಿದಾ ಆಗಿದ್ದಾರೆ.

ಕಲರ್‌ ಫುಲ್‌ ಬಿಕಿನಿ ತೊಟ್ಟು, ಹಾರ್ಟ್‌ ಶೇಪ್‌ನಲ್ಲಿ ಕೈಯನ್ನು ಮೇಲೆತ್ತಿ ಸೋನು ಪೋಸ್‌ ಕೊಟ್ಟಿದ್ದಾರೆ. ಈ ಫೊಟೋವನ್ನು ಸೋನು ಶ್ರೀನಿವಾಸ ಗೌಡ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದು, ತೆಳ್ಳಗೆ ಬೆಳ್ಳಗೆ ಇರೋ ಸೋನು ಶ್ರೀನಿವಾಸ್ ಗೌಡ, ಬಿಕಿನಿಯಲ್ಲೂ ಹೊಸ ರಂಗನ್ನೆ ಚೆಲ್ಲಿದ್ದಾರೆ. ಸೋನು ಬೋಲ್ಡ್ ಫೋಟೋಸ್​ಗೆ ಪಡ್ಡೆ ಹುಡುಗರು ಕಾಮೆಂಟ್‌ಗಳಲ್ಲಿ ಅಲೆ ಎಬ್ಬಿಸಿದ್ದಾರೆ.

ಕಾಮೆಂಟ್‌ನಲ್ಲಿ ವಾವ್‌, ಸೂಪರ್‌ಗೂ ಮೀರಿ, ʻಬಾಲಿವುಡ್‌ ಹೀರೋಯಿನ್‌, ಮೈ ಗರ್ಲ್‌ʼ ಅಂತ ಸಹ ಯುವಕರು ಕೊಂಡಾಡಿದ್ದಾರೆ. ಈ ಹಿಂದೆ ಮಾಲ್ಡಿವ್ಸ್‌ನಲ್ಲಿ ಹಾಟ್‌ ಲುಕ್‌ನಲ್ಲಿ ವಿಡಿಯೋ ಮಾಡಿ ಸಖತ್ ಸದ್ದು ಮಾಡಿದ್ದಳು. ಇದೀಗ ಫುಲ್ ಬಿಕಿನಿಯಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಇದನ್ನೂ ಓದಿ : ಒನ್ ವೇಯಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಕಾರು – ಫ್ಲೈಓವರ್ ಮೇಲಿಂದ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು!

Btv Kannada
Author: Btv Kannada

Read More