ಒನ್ ವೇಯಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಕಾರು – ಫ್ಲೈಓವರ್ ಮೇಲಿಂದ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು!

ಬೆಂಗಳೂರು : ಹಿಟ್ ಅಂಡ್ ರನ್‌ಗೆ ಫ್ಲೈಓವರ್ ಮೇಲಿಂದ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ಸಮೀಪದ ಬಚ್ಚಳ್ಳಿ ಗೇಟ್ ಫ್ಲೈಓವರ್ ಮೇಲೆ ನಡೆದಿದೆ. ಬೆಂಗಳೂರಿನ ಬಾಣಸವಾಡಿ ಮೂಲದ ನೇತ್ರಾವತಿ (31) ಹಿಟ್ ಅಂಡ್ ರನ್‌ಗೆ ಬಲಿಯಾದ ಮಹಿಳೆ.

ನೇತ್ರಾವತಿ ಪತಿಯ ಜೊತೆ ಬೈಕ್​ನಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ಹೋಗುತ್ತಿದ್ದರು. ಈ ವೇಳೆ ಒನ್ ವೇನಲ್ಲಿ ಬಂದ ಕಾರು ಬೈಕ್‌ಗೆ ಡಿಕ್ಕಿಯಾಗಿದ್ದು, ಕಾರು ಗುದ್ದಿದ ರಭಸಕ್ಕೆ ಬೈಕ್‌ನಲ್ಲಿದ್ದ ನೇತ್ರಾವತಿ ಫ್ಲೈಓವರ್ ಕೆಳಗೆ ಬಿದ್ದಿದ್ದಾರೆ. ಫ್ಲೈಓವರ್ ಮೇಲಿಂದ ಬಿದ್ದಿದ್ದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದು ನೇತ್ರಾವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಬೈಕ್‌ನ ಎಡಭಾಗಕ್ಕೆ ಬಿದ್ದು ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ದೇವನಹಳ್ಳಿ ಸಂಚಾರಿ ಪೊಲೀಸರು ಕಾರು ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ. ಘಟನೆ ಸಂಬಂಧ ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಗಣೇಶ ಹಬ್ಬ, ಈದ್‌ ಮಿಲಾದ್​ಗೆ ಡಿಜೆ ನಿಷೇಧ – ಪೊಲೀಸ್ ಸುತ್ತೋಲೆಯನ್ನು ಎತ್ತಿ ಹಿಡಿದ ಹೈಕೋರ್ಟ್‌!

Btv Kannada
Author: Btv Kannada

Read More