ವಿಚಾರಣೆಗೆ ಹಾಜರಾಗುವಂತೆ ಬಿಗ್​ಬಾಸ್ ಸ್ಪರ್ಧಿ ರಜತ್​ಗೆ ಧರ್ಮಸ್ಥಳ ಪೊಲೀಸರ ನೋಟಿಸ್ – ರಜತ್​ಗೆ ಇನ್ನೂ ತಪ್ಪದ ಬೆದರಿಕೆ ಕರೆಗಳು!

ಮಂಗಳೂರು : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿ ಸುಳ್ಳು ಸುದ್ಧಿ ಪ್ರಸಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಯೂಟ್ಯೂಬರ್ಸ್​ ಮೇಲೆ ಸ್ಥಳೀಯ ಗುಂಪೊಂದು ಹಲ್ಲೆ ನಡೆಸಿತ್ತು. ಗಲಾಟೆ ನಡೆದಾಗ ಸ್ಥಳದಲ್ಲಿ ಬಿಗ್​ಬಾಸ್ ಸ್ಪರ್ಧಿ ರಜತ್ ಸಹ ಹಾಜರಿದ್ದರು. ಇದೀಗ ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್​ಗೆ ಧರ್ಮಸ್ಥಳ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಿದ್ದಾರೆ.

ಯೂಟ್ಯೂಬರ್ಸ್ ಹಲ್ಲೆ ಕೇಸ್​ ಸಂಬಂಧ ರಜತ್ ಕಿಶನ್​ಗೆ ಧರ್ಮಸ್ಥಳ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಿದ್ದಾರೆ. ಅಷ್ಟೇ ಅಲ್ಲದೆ ಸೋಶಿಯಲ್​ ಮೀಡಿಯಾದಲ್ಲಿ ಶಾರದಾ ಭಟ್ ಎಂಬುವವರು ರಜತ್​ಗೆ ಬೆದರಿಕೆ ಹಾಕಿದ್ದರು. ಹಾಗಾಗಿ ಈ ಕೇಸ್ ಬಗ್ಗೆಯೂ ವಿಚಾರಣೆ ನಡೆಸಲು ಧರ್ಮಸ್ಥಳ ಪೊಲೀಸರು ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್​ಗೆ ನೋಟಿಸ್ ಕೊಟ್ಟಿದ್ದಾರೆ.

ನನ್ನ ಪ್ರೀತಿಯ ಸ್ನೇಹಿತರೇ ಮತ್ತು ಮಾಧ್ಯಮ ಸ್ನೇಹಿತರೇ, ಈ ರಜತ್ ಯಾವ ಪೊಲೀಸ್ ಠಾಣೆಯ ಗಡಿಯಲ್ಲಿ ನೆಲೆಸಿದ್ದಾನೆ ಎಂಬುದರ ಕುರಿತು ನಿಮಗೆ ಏನಾದರೂ ಮಾಹಿತಿ ಇದ್ದರೆ, ದಯವಿಟ್ಟು ನನಗೆ ತಿಳಿಸಿ. ನಮ್ಮ ಹೆಣ್ಣು ಮಗುವಿನ ಕಲ್ಯಾಣಕ್ಕಾಗಿ ಪ್ರಚಾರ ಪಡೆಯುವ ಹೆಸರಿನಲ್ಲಿ ನಮ್ಮ ಪವಿತ್ರ ಸ್ಥಳ ಧರ್ಮಸ್ಥಳ ಮತ್ತು ಪೂಜ್ಯ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಮಾತನಾಡುತ್ತಿರುವ ಎಲ್ಲರನ್ನು ಕಾನೂನಿನ ಮೂಲಕ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ರಜತ್​ಗೆ ಬೆದರಿಕೆ ಹಾಕಿದ್ದಾರೆ.

ನೋಟಿಸ್​​ನಲ್ಲಿ ಏನಿದೆ?

ದಿನಾಂಕ: 06-08-2025 ರಂದು 18:00 ಗಂಟೆ ಸಮಯಕ್ಕೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಾಳ ಕ್ರಾಸ್ ಎಂಬಲ್ಲಿ ಕುಡ್ಲ ರಾಂಪೇಜ್ ಯೂಟ್ಯೂಬರ್ ಆಗಿರುವ ಅಜಯ್ ಬಿ ಎಂಬುವವರು ಬಿಗ್ ಬಾಸ್ ಖ್ಯಾತಿಯ ರಜತ್ ಬೈಟ್ ತೆಗೆಯುತ್ತಿದ್ದರು. ಈ ವೇಳೆ ಅಜಯ್ ಮೇಲೆ ಆರೋಪಿಗಳಾದ ಧನಕೀರ್ತಿ ಅರಿಗ ಮತ್ತು ಇತರರು ಕಾನೂನು ಬಾಹಿರವಾಗಿ ಗುಂಪು ಸೇರಿ ಅಕ್ರಮ ಕೂಟ ಸೇರಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ದೂರುದಾರ ಅಜಯ್ ಬಿ ಕೊಟ್ಟ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಸೆಕ್ಷನ್ 189(2), 191(2), 115(2), 324(53), 352, 307 ಜೊತೆಗೆ 190 BNS-2023 ಪ್ರಕರಣ ವರದಿಯಾಗಿ ತನಿಖೆ ನಡೆಯುತ್ತಿದೆ. ಅಷ್ಟೇ ಅಲ್ಲದೇ ನಿಮಗೆ ದಿನಾಂಕ: 06-08-2025 ರಂದು ಸುಮಾರು 60 ಜನರ ಗುಂಪು ಸೌಜನ್ಯ ಕುಟುಂಬಸ್ಥರ ಮನೆ ಬಳಿ ನಿಮಗೆ ಬೆದರಿಕೆ ಹಾಕಿದ ಬಗ್ಗೆ ಕ್ರಮಕೈಗೊಳ್ಳುವರೇ ಮೇಲಾಧಿಕಾರಿಯವರಿಗೆ ಅಂಚೆ ಮೂಲಕ ದೂರು ನೀಡಿದ್ದೀರಿ. ಈ ಸಂಬಂಧ ಆ.28ರಂದು 10 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಬೇಕು.

ಇದನ್ನೂ ಓದಿ : ಮಾಸ್ಕ್ ಮ್ಯಾನ್ ಚಿನ್ನಯ್ಯ ಬಂಧನ ಆಗಿರುವುದು ನಿಜ, ಇದರ ಹಿಂದೆ ಯಾವ ಜಾಲ ಇದೆ ಅನ್ನೋದನ್ನು ಪತ್ತೆ ಮಾಡ್ತೇವೆ – ಜಿ. ಪರಮೇಶ್ವರ್‌!

Btv Kannada
Author: Btv Kannada

Read More