ಮಂಡ್ಯದಲ್ಲಿ ಮಾಜಿ ಸಂಸದೆ v/s ಹಾಲಿ ಸಚಿವರ ಫೈಟ್​ – ಸುಮಲತಾ ಅಂಬರೀಶ್ ನಿರ್ಮಿಸಿದ್ದ ಬಸ್ ತಂಗುದಾಣ ಡೆಮಾಲಿಷ್!

ಮಂಡ್ಯ : ಮಾಜಿ ಸಂಸದೆ ಸುಮಲತಾ ಅಂಬರೀಶ್ ನಿರ್ಮಿಸಿದ್ದ ಬಸ್ ತಂಗುದಾಣ ಡೆಮಾಲಿಷ್ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮದಲ್ಲಿ ನಡೆದಿದೆ. ಈ ವಿಚಾರವಾಗಿ ಮಂಡ್ಯ ಜಿಲ್ಲೆಯಲ್ಲಿ ಮಾಜಿ ಸಂಸದೆ ಮತ್ತು ಹಾಲಿ ಸಚಿವರ ನಡುವೆ ಬಿಗ್ ಫೈಟ್​ ನಡೆದಿದೆ.

ಬಸ್ ತಂಗುದಾಣ ಕೆಡವಿ ಅದೇ ಜಾಗದಲ್ಲಿ ಗ್ರಾಮ ಪಂಚಾಯತ್​​ ನೂತನ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದೆ. ಗ್ರಾಮ ಪಂಚಾಯತ್​​ ನೂತನ ಕಟ್ಟಡ ಕಟ್ಟಲು ಸಚಿವರಿಂದ ಗುದ್ದಲಿ ಪೂಜೆ ನಡೆಯಲಿದೆ. ನೂತನ ಕಟ್ಟಡಕ್ಕೆ ನಾಳೆ ಚಲುವರಾಯಸ್ವಾಮಿ ಗುದ್ದಲಿ ಪೂಜೆ ಮಾಡಲಿದ್ದಾರೆ. ಬಸ್ ತಂಗುದಾಣ ಕೆಡವಿದ್ದಕ್ಕೆ ಮಾಜಿ ಸಂಸದೆ ಸುಮಲತಾ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.

ಈ ಹಿಂದೆ ಸುಮಲತಾ ಸಂಸದೆಯಾಗಿದ್ದಾಗ ಬಸ್ ತಂಗುದಾಣ ನಿರ್ಮಿಸಿದ್ದರು. ಗ್ರಾಮಸ್ಥರ ಒತ್ತಾಯದ ಮೇರೆಗೆ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಲಾಗಿತ್ತು, ಇದೀಗ 2 ವರ್ಷದಲ್ಲೇ ಗ್ರಾ.ಪಂ ಅಧಿಕಾರಿಗಳು ಬಸ್ ತಂಗುದಾಣ ಡೆಮಾಲಿಷ್ ಮಾಡಿದ್ದಾರೆ. ಗ್ರಾ.ಪಂ ನೂತನ ಕಟ್ಟಡ ನಿರ್ಮಾಣಕ್ಕಾಗಿ ಡೆಮಾಲಿಷ್ ಮಾಡಿದ್ದಾಗಿ PDO ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸಾರ್ವಜನಿಕರ ಹಣ ಹೊಡೆಯಲು ಹೊಸ ಕಾಮಗಾರಿ ನಡೆಸುತ್ತಿರುವ ಆರೋಪ ಕೇಳಿಬಂದಿದ್ದು, ನಾಳೆ ಸಚಿವ ಚಲುವರಾಯಸ್ವಾಮಿ ಗುದ್ದಲಿ ಪೂಜೆ ಮಾಡಬಾರದೆಂದು ಸುಮಲತಾ ಬೆಂಬಲಿಗರು ಆಗ್ರಹಿಸಿದ್ದಾರೆ. ಇತ್ತ ನಾಳೆಯೇ ಗುದ್ದಲಿ ಪೂಜೆ ಮಾಡುವಂತೆ ಚಲುವರಾಯಸ್ವಾಮಿ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ : ಭಾರತಕ್ಕೆ ಮತ್ತೆ ಕಾಲಿಟ್ಟ ಟಿಕ್​ಟಾಕ್? 5 ವರ್ಷಗಳ ನಂತರ ಓಪನ್ ಆಗ್ತಿದೆ ಟಿಕ್​ಟಾಕ್ ವೆಬ್​ಸೈಟ್!

Btv Kannada
Author: Btv Kannada

Read More