ನ್ಯೂಯಾರ್ಕ್​ನಲ್ಲಿ ಭಾರತೀಯ ಪ್ರವಾಸಿಗರಿದ್ದ ಬಸ್ ಅಪಘಾತ – ಐವರು ಸಾವು!

ಪ್ರವಾಸಿ ಬಸ್ ಅಪಘಾತಕ್ಕೀಟಾಗಿ 5 ಪ್ರಯಾಣಿಕರು ಮೃತಪಟ್ಟಿರುವ ಘಟನೆ ನ್ಯೂಯಾರ್ಕ್​ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ನಯಾಗರಾ ಜಲಪಾತದಿಂದ ನ್ಯೂಯಾರ್ಕ್ ನಗರಕ್ಕೆ 54 ಜನರನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್, ಬಫಲೋದಿಂದ ಪೂರ್ವಕ್ಕೆ ಸುಮಾರು 25 ಮೈಲುಗಳಷ್ಟು ದೂರದಲ್ಲಿರುವ ಪೆಂಟ್ರೋಕ್ ಬಳಿಯ ಇಂಟರ್ಸ್ಟ್ರೇಟ್ 90ರಲ್ಲಿ ಶುಕ್ರವಾರ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಐದು ಪ್ರಯಾಣಿಕರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪ್ರಯಾಣಿಕರು ಭಾರತೀಯ, ಚೀನಿ ಮತ್ತು ಫಿಲಿಪಿನೋ ಮೂಲದವರಾಗಿದ್ದಾರೆ.

ಇದನ್ನೂ ಓದಿ : ಅಕ್ರಮ ಗಣಿಗಾರಿಕೆ ವಿಚಾರಣೆಗೆ ತ್ವರಿತ ನ್ಯಾಯಾಲಯ.. ‘ಬಿ’ ರಿಪೋರ್ಟ್​ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ!

Btv Kannada
Author: Btv Kannada

Read More