ಅನುಶ್ರೀ ಮದುವೆಗೆ ಮುಹೂರ್ತ ಫಿಕ್ಸ್ – ಆ.28ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಖ್ಯಾತ ನಿರೂಪಕಿ!

ಕನ್ನಡದ ಖ್ಯಾತ ನಿರೂಪಕಿ, ನಟಿ ಅನುಶ್ರೀ ಅವರ ಮದುವೆ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆ.28 ರಂದು ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಅನುಶ್ರೀ ಅವರ ಮದುವೆ ಕಾರ್ಯಕ್ರಮ ನಡೆಯಲಿದೆ.

ಕೊಡಗು ಮೂಲದ ರೋಷನ್ ಜೊತೆ ಆ್ಯಂಕರ್ ಅನುಶ್ರೀ ಹಸೆಮಣೆ ಏರಲಿದ್ದಾರೆ. ಆ.28 ರಂದು ಬೆಳಗ್ಗೆ 10:56 ಶುಭ ಮುಹೂರ್ತದಲ್ಲಿ ಅನುಶ್ರೀ ಅವರು ರೋಷನ್ ಕೈ ಹಿಡಿಯಲಿದ್ದಾರೆ.

‘ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ’ ಎಂದು ಅನುಶ್ರೀ ಆಮಂತ್ರಣ ಪತ್ರಿಕೆಯಲ್ಲಿ ಬರೆಯಿಸಿದ್ದಾರೆ.

ಇದನ್ನೂ ಓದಿ : ‘ನಂದಗೋಕುಲ’ದಲ್ಲಿ ಗೋಕುಲಾಷ್ಟಮಿಯ ಅಂಗವಾಗಿ ಹರಿಕಥೆ – ಶ್ರೀಕೃಷ್ಣನ ಲೀಲೆಯನ್ನ ಹೇಳಲಿದ್ದಾರೆ ಅಮೃತಾ ನಾಯ್ಡು!

Btv Kannada
Author: Btv Kannada

Read More