ಕಾಂಗ್ರೆಸ್​ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಹಿಮಾಚಲ ಪ್ರದೇಶದಲ್ಲಿ ಅರೆಸ್ಟ್ – ಮನೆ, ಕಂಪನಿಗಳಲ್ಲಿ ಮುಂದುವರೆದ ಶೋಧ!

ಚಿತ್ರದುರ್ಗ : ಇಂದು ಕಾಂಗ್ರೆಸ್​ ಶಾಸಕ ಕೆಸಿ ವೀರೇಂದ್ರ ಪಪ್ಪಿ ಹಾಗೂ ಸಹೋದರರ ಚಳ್ಳಕೆರೆ ಪಟ್ಟಣದ ಹಳೆ ಟೌನ್​​ನಲ್ಲಿರುವ 4 ನಿವಾಸಗಳ ಮೇಲೆ ED ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಈ ಬೆನ್ನಲ್ಲೇ MLA ಕೆ.ಸಿ. ವೀರೇಂದ್ರ ಪಪ್ಪಿ ಅನ್ನು ED ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನಲೆಯಲ್ಲಿ ED ವೀರೇಂದ್ರ ಪಪ್ಪಿ ಅನ್ನು ಬಂಧಿಸಲಾಗಿದ್ದು, ಹಿಮಾಚಲ ಪ್ರದೇಶದ ಸಿಕ್ಕಿಂನಲ್ಲಿ ವೀರೇಂದ್ರ ಪಪ್ಪಿ ಅನ್ನು ED ಅಧಿಕಾರಿಗಳು ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆ ತರುತ್ತಿದ್ದಾರೆ.

MLA ವೀರೇಂದ್ರ ಪಪ್ಪಿ ನಿವಾಸದಲ್ಲಿ ಚಿನ್ನದ ಬಿಸ್ಕತ್ತು, ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಕೆಲವು ತಿಂಗಳ ಹಿಂದೆ ವೀರೇಂದ್ರ ಪಪ್ಪಿ ಐಷಾರಾಮಿ ಪೋರ್ಶೆ ಕಾರು ಖರೀದಿಸಿದ್ದರು. ವೀರೇಂದ್ರ ಪಪ್ಪಿ ಮಾಲೀಕತ್ವದ ಗೋವಾದ ಕ್ಯಾಸಿನೋ ಪ್ರೈಡ್​ ಮೇಲೆಯೂ ED ದಾಳಿ ನಡೆಸಿದೆ.

9 ವರ್ಷಗಳ ಹಿಂದೆ ಐಟಿ ದಾಳಿಯಾಗಿತ್ತು : ಈ ಹಿಂದೆ 2016ರ ಡಿಸೆಂಬರ್ 11ರಂದು ವೀರೇಂದ್ರ ಅವರ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು. ಆ ಸಮಯದಲ್ಲಿ ಮನೆಯ ಬಾತ್‌ರೂಂನಲ್ಲಿ 5 ಕೋಟಿ ರೂಪಾಯಿಗೂ ಹೆಚ್ಚು ನಗದು ಮತ್ತು 30 ಕೆಜಿಗೂ ಹೆಚ್ಚು ಚಿನ್ನ ಪತ್ತೆಯಾಗಿತ್ತು.

ಇದನ್ನೂ ಓದಿ : ಕಾಂಗ್ರೆಸ್​ ನಾಯಕಿ ಕುಸುಮಾ ನಿವಾಸದ ಮೇಲೆ ED ರೇಡ್​.. ಶಾಸಕ ವೀರೇಂದ್ರ ಪಪ್ಪಿ ಜೊತೆ ವ್ಯವಹಾರ ನಂಟಿನ ಆರೋಪ!

Btv Kannada
Author: Btv Kannada

Read More