ನಟ ಡಾ.ವಿಷ್ಣುವರ್ಧನ್ ಸ್ಮಾರಕ ನೆಲಸಮವಾಗಿದ್ದು ಅಭಿಮಾನಿಗಳ ಪಾಲಿಗೆ ನಿಜಕ್ಕೂ ಆಘಾತ ತಂದ ವಿಚಾರ. ಹಲವು ಸ್ಯಾಂಡಲ್ವುಡ್ ನಟ-ನಟಿಯರೂ ಈ ಘಟನೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್ನ್ಯೂಸ್ ಸಿಕ್ಕಿದೆ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸಕಲ ತಯಾರಿ ನಡೆಯುತ್ತಿದೆ.

ಡಾ.ವಿಷ್ಣುವರ್ಧನ್ ಸ್ಮಾರಕ ಕೆಂಗೇರಿ ಬಳಿ ನಿರ್ಮಾಣವಾಲಿದ್ದು, ಅದೇ ಜಾಗದಲ್ಲಿ 25 ಅಡಿ ಉದ್ದದ ವಿಷ್ಣು ಪ್ರತಿಮೆ ಸ್ಥಾಪನೆಯಾಗಲಿದೆ. ವಿಷ್ಣುದಾದ ಪ್ರತಿಮೆ ನಿರ್ಮಾಣಕ್ಕೆ ಅಭಿಮಾನಿಗಳು ಅಡ್ವಾನ್ಸ್ ಕೂಡ ಕೊಟ್ಟಿದ್ದಾರೆ.

ದಾದಾ ಫ್ಯಾನ್ಸ್ ಸದ್ದಿಲ್ಲದೇ ಮಹತ್ವದ ಕೆಲಸ ಆರಂಭಿಸಿದ್ದು, ಈ ಬಗ್ಗೆ ವೀರಕಪುತ್ರ ಶ್ರೀನಿವಾಸ್ ಎಂಬಾತ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಸಂಸತ್ ಭವನದಲ್ಲಿ ಮತ್ತೆ ಭಾರೀ ಭದ್ರತಾ ವೈಫಲ್ಯ.. ಗೋಡೆ ಹಾರಿ ಆವರಣ ಪ್ರವೇಶಿಸಿದ ಅನಾಮಿಕ!
Author: Btv Kannada
Post Views: 380







