ಕ್ರಿಕೆಟ್ ನೋಡ್ತೀನಿ, ಆದ್ರೆ ಫ್ಯಾನ್ ಅಲ್ಲ.. ನಾನು ಕಬ್ಬಡಿ ಪ್ಲೇಯರ್​ ಎಂದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು : ನಾನು ಕ್ರಿಕೆಟ್ ನೋಡ್ತೀನಿ, ಆದ್ರೆ ಫ್ಯಾನ್ ಅಲ್ಲ. ಯಾವತ್ತೂ ಕ್ರಿಕೆಟ್‌ ಆಡಿಲ್ಲ, ಗಲಾಟೆ ಮಾಡಿ ಬ್ಯಾಟಿಂಗ್ ಮಾಡಿದ್ರು ಔಟ್ ಆಗ್ತಿದ್ದೆ. ನಾನು ಕಬ್ಬಡಿ ಆಟಗಾರ ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲಿ ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ನಿಯಮ 69 ಅಡಿಯಲ್ಲಿ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, “ನಾನು ಕಬ್ಬಡಿ ಆಟಗಾರ. ಶಾಸಕರ ದಿನಾಚರಣೆ ದಿನ ಕಬ್ಬಡಿ ಆಟ ಆಡಿ ಕಾಲು ಏಟು ಮಾಡಿಕೊಂಡಿದ್ದೆ. ಒಂದು ತಿಂಗಳು ಓಡಾಡೋಕೆ ಆಗ್ತಿರಲಿಲ್ಲ. ಮುಂಬೈ ಮೂಲದ ವೈದ್ಯರಿಂದ ಚಿಕಿತ್ಸೆ ಪಡೆದು ಗುಣಮುಖವಾಗಿದ್ದೆ. ಅದೇ ವರ್ಷ ಜೆಡಿಎಸ್ ನಿಂದ ಹೊರ ಹಾಕಿದ್ದರು ಎಂದು ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ : ಸಂಸತ್​ ಭವನದಲ್ಲಿ ಮತ್ತೆ ಭಾರೀ ಭದ್ರತಾ ವೈಫಲ್ಯ.. ಗೋಡೆ ಹಾರಿ ಆವರಣ ಪ್ರವೇಶಿಸಿದ ಅನಾಮಿಕ!

Btv Kannada
Author: Btv Kannada

Read More